ಮನೆ ರಾಜ್ಯ ಚಾಮರಾಜನಗರ: ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿದ್ದ ಚಿರತೆ ಸೆರೆ

ಚಾಮರಾಜನಗರ: ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿದ್ದ ಚಿರತೆ ಸೆರೆ

0

ಚಾಮರಾಜನಗರ: ಕಳೆದ ಒಂದು ವಾರದಿಂದ ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

Join Our Whatsapp Group

ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುಂತೂರು ಬೆಟ್ಟದಲ್ಲಿ ಸ್ಪೆಷಲ್ ಲೆಪರ್ಡ್ ಟಾಸ್ಕ್ ಫೋರ್ಸ್ ನೇತೃತ್ವದಲ್ಲಿ ಕೂಂಬಿಂಗ್​ ಮೂಲಕ ಚಿರತೆ ಸೆರೆ ಹಿಡಿಯಲಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರಿನಿಂದ ಆಗಮಿಸಿದ್ದ ಟಾಸ್ಕ್​ ಫೋರ್ಸ್​ ಮಲ್ಲಿಗೆಹಳ್ಳಿ ಸುತ್ತಮುತ್ತ 60 ಸಿಸಿಕ್ಯಾಮರಾ, 2 ದೊಡ್ಡ ಬೋನ್​ ಸೇರಿದಂತೆ 9 ಬೋನ್​ ಗಳನ್ನು ಸಿಬ್ಬಂದಿ ಅಳವಡಿಸಿದ್ದರು.

ಅರಣ್ಯ ಇಲಾಖೆಯ 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಂಬಿಂಗ್​ ಕಾರ್ಯಚರಣೆ ಕೂಡ ಮಾಡಲಾಗಿತ್ತು. ಸದ್ಯ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.