Saval TV on YouTube
ಚಾಮರಾಜನಗರ(Chamarajangara): ಜಿಲ್ಲೆಯಾದ್ಯಂತ ಶುಕ್ರವಾರ ಮುಂಜಾನೆಯಿಂದ ಆರಂಭವಾದ ಜಿಟಿಜಿಟಿ ಮಳೆ ಶನಿವಾರವೂ ಮುಂದುವರೆದಿದ್ದು ಗಡಿಜಿಲ್ಲೆ ಜನರು ಹೈರಣಾಗಿದ್ದಾರೆ.
ಈ ನಡುವೆ ಹನೂರು ತಾಲೂಕಿನ ಪಳನಿಮೇಡು ಶಾಲೆಯ ಮೇಲ್ಛಾವಣಿ ದುರಸ್ತಿ ಆಗದಿರುವುದರಿಂದ ಛಾವಣಿ ಸೋರುತ್ತಿದ್ದು, ಸದರಿ ಕೊಠಡಿಗಳಲ್ಲಿಯೇ ಮಕ್ಕಳಿಗೆ ಪಾಠ-ಪ್ರವಚನ ನಡೆಸಿರುವ ಆರೋಪ ಕೇಳಿಬಂದಿದೆ.
ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 130 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 130 ವಿದ್ಯಾರ್ಥಿಗಳಿಗೆ ಕೇವಲ 5 ಕೊಠಡಿಗಳಿದ್ದು, ಇದರಲ್ಲಿ 2 ಮಂಗಳೂರು ಹಂಚಿನ ಕಟ್ಟಡಗಳು ತೀವ್ರ ಶಿಥಿಲಗೊಂಡಿವೆ. ಇದಲ್ಲದೆ ಕೋತಿಗಳ ಹಾವಳಿ ಹೆಚ್ಚಿರುವುದರಿಂದ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ.
ಇರುವ 3 ಕೊಠಡಿಗಳು ಆರ್’ಸಿಸಿ ಕಟ್ಟಡಗಳಾಗಿದ್ದರೂ ಸಹ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಗೋಡೆಗಳು ಶಿಥಿಲಗೊಂಡಿವೆ. ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.