ಚಾಮರಾಜನಗರ: ನಗರದ ಹೌಸಿಂಗ್ ಬೊರ್ಡ್ ಅಂಬೇಡ್ಕರ್ ಪಾರ್ಕ್ ಸಮೀಪದ ಮನೆಯೊಂದರಲ್ಲಿ ಕಳೆದ ರಾತ್ರಿ ಕಳ್ಳತನವಾದ ಘಟನೆ ನಡೆದಿದೆ.
ನಿವಾಸಿ ಮಂಜುಳ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಬಂದು ಪರಿಶೀಲನೆ ನಡೆಸಿದ್ದಾರೆ. ಮಂಜುಳ ಹಾಗೂ ಮಕ್ಕಳು ಭಾನುವಾರ ಸಂಜೆ ತಮ್ಮ ಅಮ್ಮನ ಮನೆಗೆಂದು ಹೋಗಿಧ್ದಾಗ ಈ ಘಟನೆ ನಡೆದಿದೆ. ಕಾಲೇಜಿಗೆ ತೆರಳಲು ಮಗ ಊರಿನಿಂದ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರೋದು ಗೋಚರವಾಗಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತನ ನಿವಾಸಿ ಮಂಜುಳರವರು ಬೀರುವನ್ನ ಬಂದು ನೋಡಲಾಗಿ ಅದರಲ್ಲಿದ್ದ ೧೨೦ ಗ್ರಾಂ ನಷ್ಟು ಚಿನ್ನ, ೨೦೦-೩೦೦ ಗ್ರಾಂ ಬೆಳ್ಳಿ, ೧೦ ಸಾವಿರ ನಗದು ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.
ಪಟ್ಟಣ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ..ಸ್ಥಳಕ್ಜೆ ಎಎಸ್ಪಿ ಶಶಿದರ್ ಭೇಟಿ ನೀಡಿ ಪರಿಶೀಲಿಸಿದರು.