ಚಾಮರಾಜನಗರ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂಗೆ ಮೇಲೆ ಇಂದು ಏಕಾಏಕಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮೂರು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು, ಆಸ್ತಿ ವಿವರದ ಮಾಹಿತಿ ತೆಗೆದುಕೊಂಡು ಕಚೇರಿಗೆ ಬರುವಂತೆ ವೃಷಬೇಂದ್ರಪ್ಪ ಅವರಿಗೆ ಸೂಚನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಹೆಚ್ಚು ಜನರು ಶೋ ರೂಂ ಗೆ ಭೇಟಿ ನೀಡಿದ್ದರು ಎಂದು ದೂರು ನೀಡಲಾಗಿದ್ದು, ಸದ್ಯ ಈ ಕಾರಣದಿಂದಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಉದ್ಯಮಿಯಾಗಿರುವ ವೃಷಬೇಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು.
ಸದ್ಯ ಇವರಿಗೆ ಎಲ್ಲಾ ಆಸ್ತಿ ವಿವರದ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಶೋ ರೂಂ ಪರಿಶೀಲನೆ ಮಾಡಿ ಇದೀಗ ಅಧಿಕಾರಿಗಳು ತೆರೆಳಿದ್ದಾರೆ.