ಮನೆ ರಾಜ್ಯ ಚಾಮರಾಜನಗರ: ಕೃಷಿ ಹೊಂಡಕ್ಕೆ ವಿಷ ಹಾಕಿದ ದುಷ್ಕರ್ಮಿಗಳು- ಸಾವಿರಾರು ಮೀನುಗಳು ಸಾವು

ಚಾಮರಾಜನಗರ: ಕೃಷಿ ಹೊಂಡಕ್ಕೆ ವಿಷ ಹಾಕಿದ ದುಷ್ಕರ್ಮಿಗಳು- ಸಾವಿರಾರು ಮೀನುಗಳು ಸಾವು

0

ಚಾಮರಾಜನಗರ: ಬಡ ರೈತ ಕೃಷಿ ಹೊಂಡದಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳಿಗೆ ದುಷ್ಕರ್ಮಿಗಳು ವಿಷ ಹಾಕಿದ ಘಟನೆ ಚಾಮರಾಜನಗರ ಪಟ್ಟಣದ ರಾಮಸಮುದ್ರದಲ್ಲಿ ನಡೆದಿದೆ.

ರಾಮಸಮುದ್ರ ಬಡಾವಣೆಯ ರೈತ ಮಹೇಶ್ ಬಾಬು ಎಂಬುವವರ ಜಮೀನಿನಲ್ಲಿ ಸಾಕಾಣಿಕೆ ಮಾಡಿದ್ದ ಸಾವಿರಾರು ಮೀನುಗಳ ಸಾವನ್ನಪ್ಪಿವೆ. ರಾಮಸಮುದ್ರ ಬಸವನಪುರ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದ ಸಮೀಪದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ.

ರೈತ ಮಹೇಶ್ ಬಾಬು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಜಮೀನಿನಲ್ಲಿ ಮೀನು ಸಾಕಾಣಿಕೆ ಮಾಡಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳು ಮೀನಿನ ಹೊಂಡಕ್ಕೆ ವಿಷ ಹಾಕಿದ್ದಾರೆ. ಹಾಗಾಗಿ ಮೀನು ಸಾಕಾಣಿಕೆ ಘಟಕದಲ್ಲಿದ್ದ ಸಾವಿರಾರು ಮೀನುಗಳು ಏಕಕಾಲದಲ್ಲಿ ಸಾವನ್ನಪ್ಪಿವೆ.

ಹಿಂದಿನ ಲೇಖನಅದ್ದೂರಿಯಾಗಿ 75 ನೇ ಗಣರಾಜ್ಯೋತ್ಸವ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ಮುಂದಿನ ಲೇಖನಚಾಮರಾಜನಗರದ ಆಮ್ಲಜನಕ ದುರಂತ: ಫೆ.1ರಿಂದ ಸರ್ಕಾರಿ ಕೆಲಸ ನೀಡಲಾಗುವುದು- ಕೆ.ವೆಂಕಟೇಶ್