ಮನೆ ರಾಜ್ಯ ಚಾಮರಾಜನಗರ – ಗ್ರಾಮಗಳ ಜನರ ನಿದ್ದೆಗೆಡಿಸಿದ್ದ, ತಾಯಿ ಹುಲಿ ಸೆರೆ..!

ಚಾಮರಾಜನಗರ – ಗ್ರಾಮಗಳ ಜನರ ನಿದ್ದೆಗೆಡಿಸಿದ್ದ, ತಾಯಿ ಹುಲಿ ಸೆರೆ..!

0

ಚಾಮರಾಜನಗರ : ಕಳೆದ ತಿಂಗಳು ತನ್ನ ನಾಲ್ಕು ಮರಿಗಳೊಂದಿಗೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ತಾಯಿ ಹುಲಿ ಕೊನೆಗೂ ಸೆರೆಯಾಗಿದೆ. ಅದರೆ ಅದರ ನಾಲ್ಕು ಮರಿಹುಲಿಗಳು ನಾಪತ್ತೆಯಾಗಿದ್ದು ಅರಣ್ಯ ಇಲಾಖೆಗೆ ತಲೆನೋವಾಗಿದೆ.

ಅದು ಕಾಡಿನಿಂದ ಬಹುದೂರ ಇರುವ ಗ್ರಾಮ. ಆದರೆ ಕಳೆದ ಒಂದುವರೆ ತಿಂಗಳ ಹಿಂದೆ ರೈತರೊಬ್ಬರ ತೋಟದಲ್ಲಿ ಒಂದು ತಾಯಿ ಹುಲಿ ಹಾಗು ಅದರ ನಾಲ್ಕು ಪಡ್ಡೆ ಮರಿಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ದಂಗುಬಡಿಸಿದ್ದವು.

ಈ ಐದು ಹುಲಿಗಳ ಸಂಚಾರದ ದೃಶ್ಯ ತೋಟವೊಂದರಲ್ಲಿ ಅಳವಡಿಸಿದ್ಧ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅರಣ್ಯ ಇಲಾಖೆಯ ನೂರಕ್ಕು ಹೆಚ್ಚು ಸಿಬ್ಬಂದಿ ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದರು.

ಕಳೆದ ಎಂಟು ದಿನಗಳ ಹಿಂದೆ ಕಾರ್ಯಾಚರಣೆ ವೇಳೆ ಬೇರೊಂದು ಗಂಡು ಹುಲಿ ಸೆರೆ ಸಿಕ್ಕಿತ್ತು. ಈ ಐದು ಹುಲಿಗಳು ಮಾತ್ರ ಚಳ್ಳೆಹಣ್ಣು ತಿನಿಸಿ ನಾಪತ್ತೆಯಾಗಿದ್ದವು. ಅರಣ್ಯ ಇಲಾಖೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಆದರೆ ನಿನ್ನೆ ಬೆಳಗ್ಗೆ ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ್ದ ಬೃಹತ್ ಬೋನಿಗೆ ತಾಯಿ ಹುಲಿ ಬಿದ್ದಿದೆ. ಬೋನಿನಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಇದು ಕೊಂದುಹಾಕಿದೆ.

ಇನ್ನೊಂದೆಡೆ ಕುಮಾರಸ್ವಾಮಿ ಎಂಬುವರ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಬೆಳಗಿನ ಜಾವ ಹುಲಿಯೊಂದು ಸಂಚರಿಸುವ ದೃಶ್ಯ ಕಂಡು ಬಂದಿದ್ದು. ಬೋನಿಗೆ ಬಿದ್ದಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ತಿಳಿದುಬರಬೇಕಿದೆ.

ಅಲ್ಲದೇ ತಾಯಿ ಹುಲಿ ಸೆರೆಯಾಗಿದ್ರೆ ಮರಿ ಹುಲಿಗಳನ್ನು ಹಿಡಿಯುವ ಕೆಲಸ ಮಾಡಬೇಕು ಇಲ್ಲವಾದರೆ ರೈತರು ನಿತ್ಯ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಎದುರಾಗುತ್ತದೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.