ಮನೆ ರಾಜ್ಯ ಚಾಮರಾಜನಗರ: ರೈಲಿನಿಂದ ಬಿದ್ದು ಯುವಕ ಸಾವು

ಚಾಮರಾಜನಗರ: ರೈಲಿನಿಂದ ಬಿದ್ದು ಯುವಕ ಸಾವು

0

ಚಾಮರಾಜನಗರ: ರೈಲಿನಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಬದನಗುಪ್ಪೆ ಬಳಿ ನಡೆದಿದೆ.

ಚಾಮರಾಜನಗರದ ಉಪ್ಪಾರ ಬಡಾವಣೆಯ ನಿವಾಸಿ ಕುಮಾರ್ (25) ಮೃತ ಯುವಕ.

ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ರೈಲು ಬದನಗುಪ್ಪೆ ಬಳಿ ಬರುತ್ತಿದ್ದಾಗ ರೈಲಿನಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಯಲ್ಲಿ ಇಡಲಾಗಿದೆ.

ಮೈಸೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಹೆತ್ತವರ ಎದುರು ಗನ್ ಪಾಯಿಂಟ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ
ಮುಂದಿನ ಲೇಖನ1 ಗಂಟೆಯಲ್ಲಿ ಬಜೆಟ್ ಓದಿ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್