ಬೆಂಗಳೂರು (Bengaluru): ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಭಾಗಗಳಲ್ಲಿ ಇಂದಿನಿಂದ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮತ್ತೊಂದೆಡೆ ಬೀದರ್ ನಲ್ಲಿ 1 ದಿನ, ಧಾರವಾಡದಲ್ಲಿ 2 ದಿನ, ಬೆಳಗಾವಿಯಲ್ಲಿ 3 ದಿನ, ಕಲಬರಗಿಯಲ್ಲಿ 1 ದಿನ ಹಾಗೂ ಹಾವೇರಿಯಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೊಡಗು, ಚಿಕ್ಕಮಗಳೂರು, ಜಿಲ್ಲೆಗಳಿಗೆ ಇಂದು ಮಾತ್ರ ಆರೆಂಜ್ ಅಲರ್ಟ್ ಸೂಚಿಸಲಾಗಿದ್ದು, ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಮತ್ತು ಹಾಸನದಲ್ಲಿ ಇಂದಿನಿಂದ 3 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇತರೆಡೆಗಳಲ್ಲಿ ಹವಾಮಾನ ವರದಿ:
ಬೆಂಗಳೂರಿನಲ್ಲಿ 26-19, ಮಂಗಳೂರಿನಲ್ಲಿ 28-24, ಶಿವಮೊಗ್ಗದಲ್ಲಿ 24-21, ಬೆಳಗಾವಿಯಲ್ಲಿ 23-20, ಮೈಸೂರಿನಲ್ಲಿ 26-20, ಮಂಡ್ಯದಲ್ಲಿ 27-21, ಕೊಡಗಿನಲ್ಲಿ 21-17, ರಾಮನಗರದಲ್ಲಿ 27-21, ಹಾಸನದಲ್ಲಿ 23-18, ಚಾಮರಾಜನಗರದಲ್ಲಿ 27-21, ಚಿಕ್ಕಬಳ್ಳಾಪುರದಲ್ಲಿ 27-19, ಕೋಲಾರದಲ್ಲಿ 28-20, ತುಮಕೂರಿನಲ್ಲಿ 27-20, ಉಡುಪಿಯಲ್ಲಿ 28-24, ಚಿಕ್ಕಮಗಳೂರಿನಲ್ಲಿ 22-18, ದಾವಣಗೆರೆಯಲ್ಲಿ 26-21, ಚಿತ್ರದುರ್ಗ 26-21, ಹಾವೇರಿಯಲ್ಲಿ 26-21, ಬಳ್ಳಾರಿಯಲ್ಲಿ 30-23, ಗದಗದಲ್ಲಿ 26-21, ಕೊಪ್ಪಳದಲ್ಲಿ 28-22, ರಾಯಚೂರಿನಲ್ಲಿ 30-23, ಯಾದಗಿರಿಯಲ್ಲಿ 29-23, ವಿಜಯಪುರದಲ್ಲಿ 28-22, ಬೀದರ್ ನಲ್ಲಿ 26-21, ಕಲಬುರಗಿಯಲ್ಲಿ 28-23, ಬಾಗಲಕೋಟೆಯಲ್ಲಿ 28-22 ಡಿಗ್ರಿ ಸೆಲ್ಸಿಯಸ್ ಇದೆ.