ಮನೆ ಸ್ಥಳೀಯ ಮಾಲೀಕರ ಗಮನಕ್ಕೆ ಬಾರದೇ ಮಾಲೀಕತ್ವ ಬದಲಾವಣೆ: ಪೂರ್ವ ಆರ್ ಟಿಓ ಕಚೇರಿಯಲ್ಲಿ ಮತ್ತೊಂದು ಅವ್ಯವಹಾರ

ಮಾಲೀಕರ ಗಮನಕ್ಕೆ ಬಾರದೇ ಮಾಲೀಕತ್ವ ಬದಲಾವಣೆ: ಪೂರ್ವ ಆರ್ ಟಿಓ ಕಚೇರಿಯಲ್ಲಿ ಮತ್ತೊಂದು ಅವ್ಯವಹಾರ

0

ಮೈಸೂರು: ಮೈಸೂರಿನ ಆರ್ ಟಿಓ ಹಗರಣಗಳು ಬಗೆದಷ್ಟು ಬಯಲಾಗುತ್ತಿದ್ದು, ಪೂರ್ವ ಆರ್ ಟಿಓ  ಅಧಿಕಾರಿಗಳು ಮಾಲೀಕರ ಗಮನಕ್ಕೆ ಬಾರದೇ ವಾಹನದ ಮಾಲೀಕತ್ವ ಬದಲಾವಣೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಮಂಗಳವಾರ ‘ಸವಾಲ್ ಟಿವಿಯಲ್ಲಿ’ ಪೂರ್ವ ಆರ್ ಟಿಓ ಕಚೇರಿಯ ಭ್ರಷ್ಟಾಚಾರ ಕುರಿತ ವರದಿ ಪ್ರಕಟವಾದ ಬೆನ್ನಲ್ಲೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಿದ್ಧಾರ್ಥ ನಗರ ನಿವಾಸಿ ಶಿವಪ್ರಸಾದ್ .ಎಸ್ ಎಂಬುವವರ ವಾಹನ ಸಂಖ್ಯೆ ಕೆಎ55 ಹೆಚ್ 8174 ಆ್ಯಕ್ಸೆಸ್ ಯು2125 ವಾಹನವನ್ನು 2010ರ ಮಾರ್ಚ್ 5 ರಂದು ಖರೀದಿಸಿದ್ದು, 2023ರ ಫೆಬ್ರವರಿ 13 ರಂದು B- extract ತೆಗೆಸಿದಾಗ ಅದರಲ್ಲಿ ಅಬ್ದುಲ್ ರಹೀಮ್ ಎಂಬುವವರು ಹೆಸರು ಮತ್ತು ವಿಳಾಸ ಕಂಡುಬಂದಿದ್ದು,  ವಾಹನ ಮಾಲೀಕತ್ವ ಬದಲಾಗಿರುವುದು ತಿಳಿದುಬಂದಿದೆ.

ಆದರೆ ಶಿವಪ್ರಸಾದ್ .ಎಸ್ ವಾಹನವನ್ನು ಯಾರಿಗೂ ಮಾರಾಟ ಮಾಡಿಲ್ಲ. ಮಾತ್ರವಲ್ಲದೇ ಅವರ ಬಳಿಯೇ ವಾಹನ ಹಾಗೂ ದಾಖಲಾತಿಗಳು ಇದೆ.  ಈ ಸಂಬಂಧ ಆರ್ ಟಿಓ ಕಚೇರಿಗೆ ಹೋಗಿ ದೂರು ನೀಡಿದರೂ ಸ್ಪಂದಿಸಿಲ್ಲ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ನ್ಯಾಯದೊರಕಿಸಿಕೊಡಬೇಕೆಂದು ವಾಹನದ ಮಾಲೀಕ ಶಿವಪ್ರಸಾದ್ .ಎಸ್ ಒತ್ತಾಯಿಸಿದ್ದಾರೆ.

ಹಿಂದಿನ ಲೇಖನ5 ವರ್ಷ ನಿಯೋಜನೆ ಪೂರ್ಣಗೊಂಡ ಸರ್ಕಾರಿ ನೌಕರರನ್ನು ಮಾತೃ ಇಲಾಖೆಗೆ ಕಳುಹಿಸಲು ಆದೇಶ
ಮುಂದಿನ ಲೇಖನಮಂಡ್ಯ: ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ