ಮನೆ ಸುದ್ದಿ ಜಾಲ ಚನ್ನಕೇಶವ ರಥೋತ್ಸವ: ವ್ಯಾಪಾರ ಮಾಡಲು ಅಲ್ಪಸಂಖ್ಯಾತರಿಗೆ ಅವಕಾಶ

ಚನ್ನಕೇಶವ ರಥೋತ್ಸವ: ವ್ಯಾಪಾರ ಮಾಡಲು ಅಲ್ಪಸಂಖ್ಯಾತರಿಗೆ ಅವಕಾಶ

0
Hoysala Architectures

ಹಾಸನ(Hassan): ಬೇಲೂರಿನ ಪ್ರಸಿದ್ಧ ಚನ್ನಕೇಶವ ದೇವಸ್ಥಾನದ ರಥೋತ್ಸವದ ವೇಳೆ ಅಲ್ಪಸಂಖ್ಯಾತರಿಗೆ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಸಮಾಜದ ವಿವಿಧ ವರ್ಗಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಮಂಗಳವಾರ ಸಭೆ ನಡೆಸಿದ್ದು, ಈ ನಿರ್ಣಯ ಕೈಗೊಂಡಿದ್ದಾರೆ.

ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಪ್ರಗತಿಪರ ಚಿಂತಕರು, ಶಾಂತಿಯುತ ಪಾದಯಾತ್ರೆ ನಡೆಸಿದರು.

ಧಾರ್ಮಿಕ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಸದಸ್ಯರು ರಥೋತ್ಸವದಂದು ಮುಸ್ಲಿಮರು ಸ್ಟಾಲ್’ಗಳ ಹಾಕಲು ಅವಕಾಶ ನೀಡಬಾರದು ಎಂದು ಕೆಲವರು ದೇವಸ್ಥಾನ ಸಮಿತಿ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ, 2002 ಅನ್ನು ಉಲ್ಲೇಖಿಸಿದ್ದರು. ಇದರಿಂದ ಸಮಸ್ಯೆ ಉದ್ಭವಗೊಂಡಿತ್ತು,

ಹಿಂದಿನ ಲೇಖನರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಕೆ.ಎಸ್.ಸಚಿವ ಈಶ್ವರಪ್ಪ
ಮುಂದಿನ ಲೇಖನನೈತಿಕ ಹೊಣೆ ಹೊತ್ತು ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿ: ಬಡಗಲಪುರ ನಾಗೇಂದ್ರ