ಹ್ಮಚಾರಿಯಾದ ಹನುಮಂತನು ಭಗವಾನ್ ಶ್ರೀರಾಮನ ಪರಮ ಭಕ್ತ ಹಾಗೂ ಶನಿಯ ಆತ್ಮೀಯ ಸ್ನೇಹಿತ. ಸದಾ ರಾಮ ನಾಮವನ್ನು ಜಪಿಸುವ ಹನುಮಂತನಿಗೆ ವಿಶೇಷ ಮಂತ್ರಗಳನ್ನು ಹಾಗೂ ಪೂಜೆಯನ್ನು ಕೈಗೊಂಡರೆ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ
“ಓಂ ಏಮ್ ಹ್ರೀಮ್ ಕ್ಲೀಮ್ ದಿನಂಕಂಪಿ ಧರ್ಮಾತ್ಮ
ಪ್ರೇಮಾಬ್ಧಿ ರಾಮವಲ್ಲಭ ಅಧ್ವೈವಂ ಮಾರುತೇ
ವೀರ ಮೇ ಭ್ಶ್ತೇಹಿ ಸತ್ವರಾಮ್
ಕ್ಲೀಮ್ ಹ್ರೀಮ್ ಏಮ್ ಓಂ.”
ಈ ಮಂತ್ರವನ್ನು ನಿತ್ಯವೂ ಹೇಳಬೇಕು. ಇಲ್ಲವಾದರೆ 108 ಬಾರಿ ಹನುಮಂತನ ನಾಮವನ್ನು ಜಪಿಸುವುದು ಅಥವಾ ಅಷ್ಟೋತ್ತರ ನಾಮಗಳನ್ನು ಪಠಿಸಬೇಕು.
ಯಾರು ಹನುಮಂತನ ಮಂತ್ರ ಜಪಿಸುತ್ತಾರೆ ಅಂತಹವರಿಗೆ ಕೆಟ್ಟ ಆತ್ಮಗಳು, ದೆವ್ವ ಹಾಗೂ ಯಾವುದೇ ದುಷ್ಟ ಶಕ್ತಿಯ ಕಾಟ ಇರುವುದಿಲ್ಲ. ಶಕ್ತಿಯುತ ಹಾಗೂ ಧನಾತ್ಮಕ ಶಕ್ತಿಯಿಂದ ಆವೃತವಾದ ಮಂತ್ರಗಳು ವ್ಯಕ್ತಿಗೆ ಅನಿಯಮಿತವಾದ ಶಕ್ತಿ ನೀಡುತ್ತದೆ. ಹನುಮಾನ್ ಮಂತ್ರ ಜಪಿಸುವುದರಿಂದ ಸಾಡೇ ಸಾತ್ ಶನಿಯ ತೊಂದರೆಗಳನ್ನು ಕಡಿಮೆ ಮಾಡುವುದು. ಹನಿಮಾನ್ ಮಂತ್ರ ಪಠಣದಿಂದ ಸಣ್ಣಮಕ್ಕಳಿಗೆ ಹಾಗೂ ದೊಡ್ಡವರಿಗೆ ಕಾಡುವ ಭಯ ಹಾಗೂ ಕೆಟ್ಟ ಆಲೋಚನೆಗಳನ್ನು ತೊಡೆದುಹಾಕಲು ಸಹಾಯ ಮಾಡುವುದು.














