ಶನಿವಾರದಂದು ನೀವು ಈ ಪರಿಣಾಮಕಾರಿ ಶನಿ ಮಂತ್ರಗಳನ್ನು ಪಠಿಸುವುದರಿಂದ ಶನಿ ದೇವನ ಆಶೀರ್ವಾದದಿಂದಾಗಿ ಉತ್ತಮ ಆರೋಗ್ಯವನ್ನು, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳಬಹುದಾಗಿದೆ. ಶನಿವಾರ ನೀವು ಪಠಿಸಬೇಕಾದ ಆ ಶಕ್ತಿಶಾಲಿ ಮಂತ್ರಗಳು ಯಾವುವು ಗೊತ್ತೇ..?
ಹಿಂದೂ ಧರ್ಮದಲ್ಲಿ, ಶನಿವಾರವನ್ನು ಶನಿ ದೇವನಿಗೆ ಸಮರ್ಪಿಸಲಾಗಿದೆ. ಶನಿ ದೇವನ ಆಶೀರ್ವಾದವನ್ನು ಪಡೆದುಕೊಳ್ಳುವುದರಿಂದ ಎಲ್ಲಾ ದುಃಖಗಳಿಂದ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆಯಿದೆ. ನೀವು ಶನಿವಾರದಂದು ವಿಧಿ – ವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರ ಜೊತೆಗೆ ಈ ಮಂತ್ರಗಳನ್ನು ಜಪಿಸಿದರೆ, ಅದು ದಾರಿದ್ರ್ಯವನ್ನು ತೊಡೆದುಹಾಕುತ್ತದೆ.
ನೀವು ಬಯಸಿದ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಶನಿವಾರದಂದು ಶನಿ ದೇವರನ್ನು ಪೂಜಿಸುವುದು ಮತ್ತು ಮಂತ್ರಗಳನ್ನು ಪಠಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಂತ್ರಗಳನ್ನು ಪಠಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರು ಆತನ ಆಶೀರ್ವಾದವನ್ನು ಪಡೆಯುತ್ತಾರೆ.
- ”ಓಂ ಶಂ ಶನೈಶ್ಚರಾಯ ನಮಃ” – ಪ್ರಯೋಜನ – ಈ ಮಂತ್ರವು ಶನಿ ದೇವನಿಗೆ ನಮಸ್ಕಾರ ಮಾಡುವ ಮಂತ್ರವಾಗಿದೆ. ಇದನ್ನು ಪಠಿಸುವ ಮೂಲಕ ಶನಿದೇವನ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾನೆ ಎನ್ನುವ ನಂಬಿಕೆಯಿದೆ.
‘2. ‘ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ – ಛಾಯಾಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ” – ಪ್ರಯೋಜನಗಳು – ಈ ಶನಿ ಮಂತ್ರವು ಶನಿ ದೇವನ ಸ್ತುತಿ ಮಂತ್ರಗಳಲ್ಲಿ ಒಂದಾಗಿದೆ. ಈ ಶನಿ ಮಂತ್ರವನ್ನು ಪಠಿಸುವ ಮೂಲಕ, ಶನಿ ದೇವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಮತ್ತು ಭಕ್ತರು ಅವನ ಆಶೀರ್ವಾದವನ್ನು ಪಡೆಯುತ್ತಾರೆ.
- ”ಓಂ ಪ್ರಾಂ ಪ್ರೀಂ ಪ್ರಂ ಸಃ ಶನೈಶ್ಚರಾಯ ನಮಃ” – ಪ್ರಯೋಜನಗಳು – ಶನಿ ದೇವನನ್ನು ಮೆಚ್ಚಿಸಲು ಈ ಮಂತ್ರವು ಸರಳವಾದ ಮಂತ್ರವಾಗಿದೆ. ಈ ಶನಿ ಮಂತ್ರವನ್ನು ನೀವು ಪಠಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ.
- ”ಓಂ ಶಂ ಶನಿಶ್ಚರಾಯ ನಮಃ” – ಪ್ರಯೋಜನಗಳು – ಶನಿ ದೇವನನ್ನು ಮೆಚ್ಚಿಸಲು ಈ ಮಂತ್ರವು ಮತ್ತೊಂದು ಸರಳ ಮಂತ್ರವಾಗಿದೆ. ಇದನ್ನು ಪಠಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ನೀವು ಶನಿವಾರದ ದಿನದಂದು ಈ ಶನಿ ಮಂತ್ರವನ್ನು ಮರೆಯದೇ ಪಠಿಸಲು ಪ್ರಯತ್ನಿಸಿ. ಮತ್ತು ಶನಿ ದೇವನ ಆಶೀರ್ವಾದವನ್ನು ಪಡೆದುಕೊಳ್ಳಿ.
- ”ಓಂ ಜೈ ಶನಿದೇವ ನಮಃ” – ಪ್ರಯೋಜನಗಳು – ಈ ಮಂತ್ರವು ಶನಿ ದೇವನನ್ನು ಸ್ತುತಿಸುವ ಮಂತ್ರವಾಗಿದೆ. ಈ ಶನಿ ಮಂತ್ರವನ್ನು ನಾವು ಪಠಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಬರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಶನಿ ಮಂತ್ರವು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.
- ”ಓಂ ಐಂ ಶನೈಶ್ಚರಾಯ ನಮಃ” – ಪ್ರಯೋಜನಗಳು – ಈ ಮಂತ್ರವು ಶನಿ ದೇವನಿಂದ ಆರೋಗ್ಯ ಮತ್ತು ರೋಗಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವ ಮಂತ್ರವಾಗಿದೆ. ಈ ಶನಿ ಮಂತ್ರವನ್ನು ನಾವು ಪಠಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಆರೋಗ್ಯ ಮತ್ತು ರೋಗಗಳಿಂದ ಮುಕ್ತಿ ಸಿಗುತ್ತದೆ.
ಶನಿ ಮಂತ್ರ ಪಠಿಸುವ ವಿಧಾನ – ಶನಿವಾರದಂದು ಬೆಳಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಶನಿದೇವನ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತುಕೊಳ್ಳಿ. ದೀಪವನ್ನು ಹಚ್ಚಿ ಮತ್ತು ಅಗರಬತ್ತಿಗಳನ್ನು ಅರ್ಪಿಸಿ. ಈ ಮಂತ್ರಗಳನ್ನು ಜಪಮಾಲೆಯೊಂದಿಗೆ 108 ಬಾರಿ ಜಪಿಸಿ. ಜಪ ಮಾಡಿದ ನಂತರ ಶನಿದೇವನಿಗೆ ಆರತಿ ಮಾಡಿ. ಮಂತ್ರಗಳನ್ನು ನಿಯಮಿತವಾಗಿ ಪಠಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಮಂತ್ರಗಳನ್ನು ಪಠಿಸುವ ಮೂಲಕ ಶನಿದೇವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸು, ಆರೋಗ್ಯ ಮತ್ತು ಶತ್ರುಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯಿದೆ.














