ಮೈಸೂರು: ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕನ್ನಡಿಗರಿಗೆ ಮೋಸವಾಗಿದೆ. ಕರ್ನಾಟಕದ ಯೋಜನೆಗೆ ಕೇಂದ್ರದಿಂದ ಒಂದೇ ಒಂದು ಯೋಜನೆ ಅನುದಾನ ಕೊಟ್ಟಿಲ್ಲ ಎಂದು ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಬಿ ಪುಷ್ಪ ಅಮರನಾಥ್ ಆರೋಪಿಸಿದರು.
ಇಂದು ಕಾಂಗ್ರೆಸ್ ಭವನ ಮುಂಬಾಗ ಮಹಿಳಾ ಕಾಂಗ್ರೆಸ್ ವತಿಯಿಂದ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಡಾ. ಬಿ ಪುಷ್ಪ ಅಮರನಾಥ್, ಬಿಜೆಪಿ ಮತ್ತು ಜೆಡಿಎಸ್ ಇಂದ 19 ಸಂಸದರು ಗೆದ್ದು ಹೋಗಿದ್ದೀರಾ ನಾಲಾಯಕ್ ನೀವು ನಿಮಗೆ ನಾಚಿಕೆ ಆಗುತ್ತಿಲ್ಲವ ಕರ್ನಾಟಕಕ್ಕೆ ಮೋಸ ಆಗಿದೆ ಎಂದು ಕುಮಾರಣ್ಣ ನಾಚಿಕೆ ಆಗುತ್ತಿಲ್ಲವಾ ಕರ್ನಾಟಕಕ್ಕೆ ಅಮೃತವಾಗಿದೆಯಂತೆ. ಈ ಬಜೆಟ್ ನೀವೇನಾದರೂ ಮಾತನಾಡಿದ್ದೀರಾ ? ಈ ಬಜೆಟ್ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ. ನೀರು,ಬಾಷೆ,ಅಭಿವೃದ್ಧಿ ವಿಚಾರ ಯೋಜನೆಗೆ ಒಂದೇ ಒಂದು ಅನುದಾನ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಹಲವಾರು ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಅವರ ಮಿತ್ರ ಪಕ್ಷ ರಾಜ್ಯಗಳಿಗೆ ಮಾತ್ರ ಕೇಂದ್ರ ಬಿಜೆಪಿ ಸರಕಾರ ಅನುದಾನ ಕೊಟ್ಟಿದ್ದಾರೆ ಇದು ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಕನ್ನಡಿಗರು ನಾವು ಸ್ವಾಭಿಮಾನಿಗಳು ನಮ್ಮ ತೆರಿಗೆ ನಮ್ಮ ಹಕ್ಕು ಕರ್ನಾಟಕ ರಾಜ್ಯದಿಂದ ನಾವು ಹೆಚ್ಚು ತೆರಿಗೆ ಕೊಡುತ್ತೇವೆ. ಇವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.ಇದನ್ನ ಖಂಡಿಸಿ ಕಾಂಗ್ರೆಸ್ ನ ಸಂಸದರು ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಾವು ಯಾವತ್ತೂ ಕೈಕಟ್ಟಿ ಕುಳಿತಿಲ್ಲ ಕೇಂದ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ. ಕುಮಾರಣ್ಣ ಒಬ್ಬ ಕೇಂದ್ರ ಮಂತ್ರಿ ಯಾಗಿದ್ದಾರೆ ಏನೂ ಮಾತನಾಡುತ್ತಿಲ್ಲ ಸೋತಿದ್ದಾರೆ ಅವರು ಕೈಕಟ್ಟಿ ನಿಂತಿದ್ದಾರೆ. ಮೋದಿ ಮುಂದೆ ಹೊರಡಿಕೊಂಡಿ ತಾಕತ್ ಇದ್ರೆ ಅನುದಾನ ತರಬೇಕು. ನಾವು ಸುಮ್ಮನೆ ಕುಳಿತು ಕೊಳ್ಳುವುದಿಲ್ಲ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ನಾವು ನ್ಯಾಯವನ್ನು ಕೇಳುವುದಕ್ಕೆ ಸದಾ ಹೋರಾಟ ಮಾಡುತ್ತೇವೆ ಎಂದರು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಹಿಳಾ ಉಪಾಧ್ಯಕ್ಷರಾದ ಪುಷ್ಪವಲ್ಲಿ, ನಗರ ಮಹಿಳಾ ಅಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ. ಗ್ರಾಮಾಂತರ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ. ಮಾಜಿ ಮೇಯರ್ ಗಳಾದ ಮೂದಾಮಣಿ. ಪುಷ್ಪಲತಾ ಜಗನ್ನಾಥ್. ಮಹಿಳಾ ಮುಖಂಡರುಗಳಾದ ನಾಗರತ್ನ. ಮಂಜುಳಾ. ಸುಶೀಲಾ ನಂಜಪ್ಪ. ಭವ್ಯ. ಇಂದ್ರ. ರಾಧಾಮಣಿ ಇನ್ನು ಮುಂತಾದವರು ಉಪಸ್ಥಿತರಿದ್ದರು.