ಮನೆ ಅಪರಾಧ ಮ್ಯಾಟ್ರಿಮೋನಿಯಲ್’​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯಿಂದ ಮಹಿಳೆಗೆ ಮೋಸ: ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿ

ಮ್ಯಾಟ್ರಿಮೋನಿಯಲ್’​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯಿಂದ ಮಹಿಳೆಗೆ ಮೋಸ: ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿ

0

ದೆಹಲಿ: ಮ್ಯಾಟ್ರಿಮೋನಿಯಲ್’​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಮಹಿಳೆಗೆ ಮೋಸ ಮಾಡಿ ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Join Our Whatsapp Group

ಈ ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್ ಪ್ರಕಾರ, ಏರ್‌ಲೈನ್ ಉದ್ಯೋಗಿ 39 ವರ್ಷದ ಮಹಿಳೆ, 15 ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌’ಸೈಟ್ ಮೂಲಕ ಅನ್ಶುಲ್ ಜೈನ್ ಎಂಬಾತನನ್ನು ಸಂಪರ್ಕಿಸಿದ್ದಾರೆ. ಅನ್ಶುಲ್ ಜೈನ್ ತನ್ನನ್ನು ಎನ್‌’ಸಿಆರ್ ಪ್ರದೇಶದಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಆಕೆಗೆ ತನ್ನ ಮನೆಯವರ ಜತೆಗೆ ಮದುವೆ ಮಾತುಕತೆ ನಡೆಸಲು ಬರುವಂತೆ ಹೇಳಿದ್ದಾನೆ. ಇದಕ್ಕೆ ಬರುವಾಗ ಉಡುಪುಗಳು ಮತ್ತು ಆಭರಣಗಳನ್ನು ತರುವಂತೆ ಅನ್ಶುಲ್ ಜೈನ್ ತನ್ನ ಬಳಿ ಹೇಳಿದ್ದಾನೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅನ್ಶುಲ್ ಜೈನ್ ನನ್ನನ್ನೂ ಬರಮಾಡಿಕೊಂಡು ಏರೋಸಿಟಿ ಫುಡ್ ಕೋರ್ಟ್‌’ನಲ್ಲಿ ಊಟ ಮಾಡಿ ಅವರ ಕಾರಿನಲ್ಲಿ ಅಲ್ಲಿಂದ ತೆರಳಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ನಂತರ, ಅನ್ಶುಲ್ ಜೈನ್ ಕಾರಿನ ಟೈರ್‌’ನಲ್ಲಿ ಏನೋ ಶಬ್ದ ಬರುತ್ತಿದೆ ಹೇಳಿದ್ದಾನೆ. ಟೈರ್ ಚೆಕ್​​ ಮಾಡಲು ಕೆಳಗೆ ಇಳಿದ ಕೂಡಲೇ ಅಲ್ಲಿಂದ ಅನ್ಶುಲ್ ಜೈನ್ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ತನ್ನ ಬಳಿಯಿದ್ದ 300 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ನಗದು, ಮೊಬೈಲ್ ಫೋನ್, ಮೂರು ಎಟಿಎಂ ಕಾರ್ಡ್‌’ಗಳು ಹಾಗೂ ಬ್ಯಾಗ್‌ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.