ಹಾವೇರಿ : ರೈತ ಈ ದೇಶದ ಬೆನ್ನೆಲುಬು ಅಂತಾರೆ. ಆದರೆ ರೈತರಿಗೆ ಎಲ್ಲಾ ಕಡೆನೂ ಮೋಸ ಆಗುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ರೈತರಿಗೆ ಎಲ್ಲದರಲ್ಲೂ ಮೋಸವಾಗುತ್ತಿದೆ. ಇದೀಗ ಹಾವೇರಿಯಲ್ಲಿ ಮಾರುಕಟ್ಟೆಯ ಕಡಲೆ ಮಾರಾಟ ಮಾಡಲು ಬಂದಿದ್ದ ರೈತನಿಗೆ ತೂಕದಲ್ಲಿ ಮೋಸ ಮಾಡಲಾಗಿದೆ. ಇದರಿಂದಾಗಿ ರೈತ ಅಂಗಡಿಯ ಮುಂದೆ ಹೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಶರಣಗೌಡ ಪಾಟೀಲ ಮಾರುಕಟ್ಟೆಯಲ್ಲಿ ಕಡಲೆ ಮಾರಾಟ ಮಾಡಲು ಬಂದಿದ್ದರು. ಆದರೆ ಮನೆಯಲ್ಲಿಯೇ ತೂಕ ಮಾಡಿಕೊಂಡು ಮಾರುಕಟ್ಟೆ ತಂದಿದ್ದರು. ಒಂದು ಚೀಲ 58, 57 ಮತ್ತು 56 ಕೆಜಿ ಚೀಲದ ಕಡಲೆ ತಂದಿದ್ದರು. ಎರೆಸೀಮೆ ಅಂಗಡಿಯಲ್ಲಿ ತೂಕ ಮಾಡಿಸಿದಾಗ ಒಂದು ಚೀಲದಲ್ಲಿ 3 ರಿಂದ 4 ಕೆಜಿಯಷ್ಟು ತೂಕ ವ್ಯತ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ವ್ಯಾಪಾರಸ್ಥರು ಹೀಗೆ ಮೋಸ ಮಾಡಿದರೆ ರೈತರು ಬದುಕುವುದು ಹೇಗೆ ಎಂದು ಕಿಡಿಕಾರಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ತೂಕದ ಮೋಸವಾಗುತ್ತಿದ್ದಂತೆ ರೈತ ಆಕ್ರೋಶ ಹೊರಹಾಕಿದ್ದಾರೆ. ಅಂಗಡಿ ಮಾಲೀಕ ಮಾತ್ರ ಸೋಮಶೇಖರ್ ಎರೆಸೀಮೆ ಏನು ವ್ಯತ್ಯಾಸ ಆಗಿಲ್ಲ. ಸಣ್ಣಪುಟ್ಟ ವ್ಯತ್ಯಾಸ ಆಗಿವೆ ಸರ್ ಅಂತ ಸಮಜಾಯಿಷಿ ಕೊಟ್ಟಿದ್ದಾರೆ. ಅಲ್ಲದೆ ಸ್ಥಳಕ್ಕೆ ಎಪಿಎಂಸಿ ನಿರ್ದೇಶಕ ಮತ್ತು ಎಸಿ ಕಲ್ಯಾಣಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತೂಕದಲ್ಲಿ ಮೋಸವಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಗೊತ್ತಾಗಿದೆ. ನಾವು ಅಂಗಡಿಯನ್ನು ಸೀಜ್ ಮಾಡುತ್ತೇವೆ ಎಂದು ಭರವಸೆ ನೀಡಿದರು.














