ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ಜೆಡಿಎಸ್ ಅಭ್ಯರ್ಥಿ ವೈಎಸ್ ವಿ ದತ್ತಾ ಅವರಿಗೆ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಕೋರ್ಟ್ ಗೆ ನೀಡಿದ ಭರವಸೆಯಂತೆ ಶನಿವಾರ (ಎ.೧೫) ಹಣ ಪಾವತಿಸಬೇಕಿತ್ತು,ಆದರೆ ಕೋರ್ಟ್ ಗೆ ಗೈರಾಗಿ ಹಾಜರಾತಿಯಿಂದ ವಿನಾಯಿತಿ ಕೋರಿದ್ದರು.
ಹಾಜರಾತಿಯಿಂದ ವಿನಾಯಿತಿ ನೀಡಲು ಜನಪ್ರತಿನಿಧಿಗಳ ಕೋರ್ಟ್ ನಿರಾಕರಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಸಿ.ಎಸ್ ಸೋಮೇಗೌಡ ಎಂಬುವರು ವೈ ಎಸ್ ವಿ ದತ್ತಾ ವಿರುದ್ಧ ಚೆಕ್ ಬೌನ್ಸ್ ಖಾಸಗಿ ದೂರು ದಾಖಲಿಸಿದ್ದರು. ಎ. 26 ರಂದು ವೈಎಸ್ ವಿ ದತ್ತಾ ಅವರನ್ನು ಕೋರ್ಟ್ ಗೆ ಹಾಜರುಪಡಿಸಲು 42 ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್ ಆದೇಶ ನೀಡಿದ್ದಾರೆ.