ಮನೆ ರಾಜ್ಯ ಚೆಕ್ ಬೌನ್ಸ್ ಪ್ರಕರಣ: ಚಲನಚಿತ್ರ ನಟ ನೀನಾಸಂ ಅಶ್ವಥ್ ಬಂಧನ

ಚೆಕ್ ಬೌನ್ಸ್ ಪ್ರಕರಣ: ಚಲನಚಿತ್ರ ನಟ ನೀನಾಸಂ ಅಶ್ವಥ್ ಬಂಧನ

0

ಹಾಸನ: ಚೆಕ್ ಬೌನ್ಸ್  ಪ್ರಕರಣದಲ್ಲಿ ಚಲನಚಿತ್ರ ನಟ ನೀನಾಸಂ ಅಶ್ವಥ್ ಅವರನ್ನು ಹಾಸನ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.             

Join Our Whatsapp Group

ಈ ವೇಳೆ ನ್ಯಾಯಾಧೀಶರ ಮುಂದೆ ತಪ್ಪು ಒಪ್ಪಿಕೊಂಡ ನಟ ನೀನಾಸಂ ಅಶ್ವಥ್ ಶೇ. 25ರಷ್ಟು   ಹಣ ಪಾವತಿಸಿ, ಜಾಮೀನು ಕೊಟ್ಟ ಬಳಿಕ ನಟನನ್ನು ಬಿಡುಗಡೆ ಮಾಡಲಾಗಿದೆ.             

ಹಾಸನದ ಮೂಲದ ರೋಹಿತ್ ಎಂಬವರಿಂದ ನಟ ಅಶ್ವಥ್ ಹಸುಗಳನ್ನು ಖರೀದಿ ಮಾಡಿದ್ದು, ಆ ವೇಳೆ 1.5 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಬಳಿಕ ರೋಹಿತ್ ಬ್ಯಾಂಕಿಗೆ ಚೆಕ್ ಹಾಕಿದಾಗ ಅದು ಬೌನ್ಸ್ ಆಗಿತ್ತು.                          

ಈ ಸಂಬಂಧ ರೋಹಿತ್ ಹಾಸನದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು, ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು.ಆದರೂ ನೀನಾಸಂ ಅಶ್ವತ್ ಕ್ಯಾರೆ ಎನ್ನಲಿಲ್ಲ.        

ಇನ್ನು ನಾಲ್ಕು ಬಾರಿಯೂ ನಟ ಅಶ್ವಥ್ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಐದನೇ ಬಾರಿಗೆ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದರಿಂದ ಹಾಸನ ಬಡಾವಣೆ ಠಾಣೆ, ಪೊಲೀಸರು ಶನಿವಾರ ರಾತ್ರಿ ಅಶ್ವಥ್ ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು .         

ನ್ಯಾಯಾಧೀಶರ ಮುಂದೆ ತಪ್ಪು ಒಪ್ಪಿಕೊಂಡ ಅಶ್ವತ್ ಈಗಲೇ ಶೇ.25ರಷ್ಟು ಹಣ ಪಾವತಿಸುತ್ತೇನೆ ಎಂದು ಉಳಿದ ಹಣ ನೀಡಲು ಸಮಯ ಕೊಡಬೇಕು ಎಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಶೇಕಡ 25ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಮೀನಿನ ಮೇಲೆ ನಟನನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಹರಂ ಶಂಕರ್ ತಿಳಿಸಿದ್ದಾರೆ.

ಹಿಂದಿನ ಲೇಖನಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ: ಡಾ ಜಿ.ಪರಮೇಶ್ವರ್ ಭರವಸೆ
ಮುಂದಿನ ಲೇಖನರೈತನ ಮೇಲೆ ಹಲ್ಲೆ ಮಾಡಿ ಟೊಮ್ಯಾಟೋ ತುಂಬಿದ್ದ ವಾಹನ ಹೈಜಾಕ್ ಮಾಡಿದ ದುಷ್ಕರ್ಮಿಗಳು