ಮನೆ ಸುದ್ದಿ ಜಾಲ ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ: ಅಪಾಯದಿಂದ ಪಾರಾದ ಚಾಲಕ

ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ: ಅಪಾಯದಿಂದ ಪಾರಾದ ಚಾಲಕ

0

ಅಂಕೋಲಾ: ರಾಸಾಯನಿಕ ತುಂಬಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ‌ ತಾಲೂಕಿನ ವಜ್ರಳ್ಳಿ ಬಳಿ ಬೆಂಕಿಗಾಹುತಿಯಾಗಿದೆ.

ಈ ಘಟನೆಯಲ್ಲಿ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ರಾಸಾಯನಿಕ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಇನ್ನೊಂದು ವಾಹನ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲೆಗೆ ಲಾರಿಯು ಸಂಪೂರ್ಣ ಸುಟ್ಟುಕರಕಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿಗಳ ತಂಡ ಆಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಯ ಬಂಧನ
ಮುಂದಿನ ಲೇಖನಟೆಂಪೊ ಟ್ರಾವಲರ್ – ಕ್ಯಾಂಟರ್ ವಾಹನ ನಡುವೆ ಅಪಘಾತ: ಇಬ್ಬರು ಸಾವು