ಮೈಸೂರು(Mysuru): ಜಿಲ್ಲಾ ಮಟ್ಟದ14 ವರ್ಷದ ಬಾಲಕರ ವಿಭಾಗದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್.ಆರ್.ಸಂದೀಪ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಾತೃಮಂಡಳಿ ವಿದ್ಯಾಸಂಸ್ಥೆಯಲ್ಲಿ ಇಂದು (ಜುಲೈ 27)ನಡೆದ ಸ್ಪರ್ಧೆಯಲ್ಲಿ ಶ್ರೀ ಪರಮಹಂಸ ವಿದ್ಯಾನಿಕೇತನ ಶಾಲೆಯ 8ನೇ ತರಗತಿಯ ಸಂದೀಪ್ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭೈರವೇಶ್ವರ ನಗರದ ನಿವಾಸಿಗಳಾದ ರುದ್ರೇಶ್ ಹಾಗೂ ಭಾಗ್ಯ ದಂಪತಿಗಳ ಪುತ್ರ ಸಂದೀಪ್ ರಾಜ್ಯಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರಾದ ಭಾಗ್ಯ ಹಾಗೂ ತರಬೇತುದಾರರಾದ ದೈಹಿಕ ಶಿಕ್ಷಣ ಶಿಕ್ಷಕರು ಯೋಗೀಶ್ ನಾಯಕ ಅವರು ಸಂದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಸಂದೀಪ್ ಅವರೊಂದಿಗೆ ತರಬೇತುದಾರರಾದ ಯೋಗೀಶ್ ನಾಯಕ ಅವರು ಇದ್ದಾರೆ.
Chess Competition S.R.Sandeep selected for state level