ಸುರಪುರ ತಾಲೂಕಿನಲ್ಲಿ ಕೃಷ್ಣಾ ನದಿ ದಂಡೆ ಮೇಲಿದೆ. ವೈಶಾಖ ಶುಕ್ರ ತದಿಗೆಯಂದು ಇಲ್ಲಿ ಜಾತ್ರೆ ನಡೆದು ಸಾವಿರಾರು ಭಕ್ತರು ಬಂದು ಸೂರ್ಯನ ಎರಡನೇ ಹೆಂಡತಿ ಎನ್ನರಾದ ಛಾಯಾ ಭಗವತಿಯನ್ನು ಪೂಜಿಸುವರು. ಅಂದು ಅಕ್ಷಯ ತದಿಗೆ ಬೆಳಿಗ್ಗೆ, ಸೂರ್ಯಕಿರಣ ದೇವಿಯ ಪಾದದ ಮೇಲೆ ಬೀಳುವಂತೆ ಸಂಯೋಜಿಸಿ ಇಲ್ಲಿ ಛಾಯಾ ಭಗವತಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ.
ತಿಂಥಿಣಿ
ಸುರಾಪುರ ತಾಲೂಕಿನ ಕೃಷ್ಣಾ ನದಿಯ ದಂಡೆ ಮೇಲಿನ ಯಾತ್ರಾಸ್ಥಳ. ಇಲ್ಲಿ ಮೌನೇಶ್ವರ ದೇವಸ್ಥಾನ ಖ್ಯಾತಿವೆತ್ತಿದೆ. ಇವನ್ನು ಮೌನಪ್ಪಯ್ಯನವರ ದರ್ಗಾ ಎನ್ನುವರು. ಹಿಂದೂ ಮುಸ್ಲಿಮರಿಬ್ಬರೂ ಇಲ್ಲಿಗೆ ನಡೆದುಕೊಳ್ಳುವರು.
ಮೌನಪ್ಪಯ್ಯ ವಿಶ್ವಕರ್ಮ ಪಂಗಡದ ಹಿಂದೂ ಸೂಫಿ ಶರಣರು.
ಸುರಪುರ ತಾಲೂಕಿನ ಮುದನೂರು ಒಂದು ಪವಿತ್ರಸ್ಥಳ. ಇಲ್ಲಿ ರಾಮನಾಥ ದೇವಾಲಯವಿದೆ. ಪ್ರಸಿದ್ಧ ಶಿವಶರಣರಾದ ದೇವರ ದಾಸಿಮಯ್ಯನವರ ಜನ್ಮಸ್ಥಳ ಇದಾಗಿದೆ.