ಮನೆ ರಾಜ್ಯ ಮುಖ್ಯಮಂತ್ರಿಗಳು ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

ಮುಖ್ಯಮಂತ್ರಿಗಳು ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

0

ಹಾವೇರಿ: ಮುಖ್ಯಮಂತ್ರಿಗಳು ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ? ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಸಂಪನ್ಮೂಲ ಕ್ರೋಢೀಕರಿಸಲು ವಿಫಲವಾಗಿದ್ದಾರೆ ಎಂದು ಹಾವೇರಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ ಟಿಯಲ್ಲಿ ಸೋರಿಕೆಯಾಗುತ್ತಿದೆ. ಸಿಎಂ ಯಾಕೆ ಸುಮ್ಮನೆ ಕುಳಿತಿದ್ದಾರೆ. ಪ್ಲ್ಯಾಸ್ಟಿಕ್, ಅಡಿಕೆ, ಸ್ಕ್ರ್ಯಾಪ್ ವ್ಯಾಪಾರದಲ್ಲಿ ಸೋರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುವುದಲ್ಲ ಎಂದರು.

ಗ್ಯಾರಂಟಿ ಬಂದ್ ಮಾಡುವಂತೆ ನಾವ್ಯಾಕೆ ಹೇಳಲಿ. ಗ್ಯಾರಂಟಿ ಯೋಜನೆ ಕೊಡಿ ಎಂದು ಹೇಳುತ್ತೇವೆ ನಾವು. ಗ್ಯಾರಂಟಿ ಕೊಡುತ್ತೇವೆಂದು ಜನರಿಗೆ ಹೇಳಿ ಅಧಿಕಾರಕ್ಕೆ ಬಂದಿದ್ದೀರಿ, ಗ್ಯಾರಂಟಿ ಕೊಡಿ. ಗ್ಯಾರಂಟಿಯೂ ಕೊಡಬೇಕು ಅಭಿವೃದ್ಧಿಯೂ ಮಾಡಬೇಕು. ಅವಾಗ ಸಿದ್ದರಾಮಯ್ಯನವರಿಗೆ ಶಹಬ್ಬಾಸ್ ಎನ್ನುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಹಿಂದಿನ ಲೇಖನಸೆಟ್ಟೇರಲು ಸಜ್ಜಾದ ನಾಡಪ್ರಭು ಕೆಂಪೇಗೌಡ ಸಿನಿಮಾ: ಡಾಲಿ ಧನಂಜಯ್ ನಟನೆ
ಮುಂದಿನ ಲೇಖನರೈತರಿಗೆ ಬೀಜ ಗೊಬ್ಬರದ ಕೊರತೆಯಾದರೆ ಅಧಿಕಾರಿಗಳನ್ನೆ ಹೊಣೆ ಮಾಡಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ