ಚಿಕ್ಕಬಳ್ಳಾಪುರ: ತನ್ನ ಅನೈತಿಕ ಸಂಬಂಧಕ್ಕೆ ತಂಗಿ ಅಡ್ಡ ಬರುತ್ತಾಳೆಂದು ಆಕೆಯ ಆರು ವರ್ಷದ ಮಗನನ್ನು ಅಕ್ಕ ಕೊಲೆ ಮಾಡಿ ಹೂತಿಟ್ಟ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ತಾಲೂಕಿನ ಮುತಕದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯರು.
ಆದರೆ ಅಂಬಿಕಾ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಅನಿತಾಗೆ ತಿಳಿದು ಬಂದಿದೆ. ಅದರಂತೆ ವಿರೋಧವೂ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಅಂಬಿಕಾ, ಅನಿತಾಳ ಆರು ವರ್ಷದ ಮಗ ಮಧುನನ್ನು ಕೊಲೆ ಮಾಡಿ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ಹೂತು ಹಾಕಿದ್ದಾಳೆ.
ಸ್ಥಳಕ್ಕೆ ಪೆರೆಸಂದ್ರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Saval TV on YouTube