ಮನೆ ಅಪರಾಧ ಚಿಕ್ಕಬಳ್ಳಾಪುರ: ಕೈ-ಕಾಲು ಕಟ್ಟಿ ಪೂಜಾರಿಯ ಕೊಲೆ

ಚಿಕ್ಕಬಳ್ಳಾಪುರ: ಕೈ-ಕಾಲು ಕಟ್ಟಿ ಪೂಜಾರಿಯ ಕೊಲೆ

0

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಪೂಜಾರಿಯೊಬ್ಬರನ್ನು ಕೈ-ಕಾಲು ಕಟ್ಟಿ ಕೊಲೆ ಮಾಡಿ ಶವವನ್ನು ಅರಣ್ಯದಲ್ಲಿ ಬಿಸಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಭಾನುವಾರದಂದು ಅರಣ್ಯ ಇಲಾಖೆಯ ಗಾರ್ಡ್ ಹನುಮಂತಪ್ಪ ಅರಣ್ಯದಲ್ಲಿ ನಿಯಮಿತ ರೌಂಡ್ಸ್ ಮಾಡುತ್ತಿದ್ದ ಸಂದರ್ಭ, ತೀವ್ರವಾಗಿ ಕೊಳೆಯುತ್ತಿರುವ ಶವವೊಂದು ಕಂಡುಬಂದಿದೆ. ಕೂಡಲೇ ಅವರು ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಚೀಲವೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಶವದ ಸ್ಥಿತಿ ನೋಡಿ ಸುಮಾರು ಮೂರು ವಾರಗಳ ಹಿಂದೆಯೇ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕತ್ತಲ್ಲಿ ರುದ್ರಾಕ್ಷಿ, ಕೈಯಲ್ಲಿ ರುದ್ರಾಕ್ಷಿ, ಹಳದಿ ಪಂಚೆ, ಶರ್ಟ್ ಧರಿಸಿದ್ದು, ನೋಡುವುದಕ್ಕೆ ದೇವಸ್ಥಾನದ ಪೂಜಾರಿಯಂತೆ ಕಾಣಿಸುತ್ತದೆ ಎನ್ನಲಾಗಿದೆ. ಆದರೆ ಗುರುತು ಪತ್ತೆಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ಪೂರ್ವನಿಯೋಜಿತ ಕೊಲೆ ಇರಬಹುದೆಂದು ಪೊಲೀಸರು ಶಂಕಿಸುತ್ತಿದ್ದಾರೆ.

ಸದ್ಯ ಸ್ಥಳಕ್ಕೆ ಫಾರೆನ್ಸಿಕ್ ತಂಡ, ಕ್ರೈಮ್ ಎಕ್ಸ್ಫರ್ಟ್ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ತನಿಖೆ ಚುರುಕುಗೊಂಡಿದೆ.