ಮನೆ ಸುದ್ದಿ ಜಾಲ ಚಿಕ್ಕಬಳ್ಳಾಪುರ: ಆಟವಾಡುತ್ತಾ ನೀರಿನ ಹೊಂಡಕ್ಕೆ ಬಿದ್ದು 4 ವರ್ಷದ ಮಗು ಸಾವು

ಚಿಕ್ಕಬಳ್ಳಾಪುರ: ಆಟವಾಡುತ್ತಾ ನೀರಿನ ಹೊಂಡಕ್ಕೆ ಬಿದ್ದು 4 ವರ್ಷದ ಮಗು ಸಾವು

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಲಗುಮೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ದುರಂತವು ಸ್ಥಳೀಯರಿಗೆ ಹಾಗೂ ಕುಟುಂಬದವರಿಗೆ ತೀವ್ರ ದುಃಖ ತಂದಿದೆ. ಕೇವಲ 4 ವರ್ಷದ ಮಗು ಅರ್ಪಿತ್ ರೆಡ್ಡಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಜಮೀನಿನಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಜೋಳ ಬಿತ್ತನೆ ಮಾಡಲು ಹೊರಟಿದ್ದ ನರಸಿಂಹಮೂರ್ತಿ ಹಾಗೂ ಭಾಗ್ಯಮ್ಮ ದಂಪತಿ ತಮ್ಮ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ, ಮಗು ಹೊಲದ ಇತರ ಭಾಗದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಹೊಂಡದಲ್ಲಿ ಬಿದ್ದು ಜೀವ ಕಳೆದುಕೊಂಡಿದೆ.

ಮಗುವನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.