ಮನೆ ಅಪರಾಧ ಚಿಕ್ಕಬಳ್ಳಾಪುರ: ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ ಲಾರಿಗಳು

ಚಿಕ್ಕಬಳ್ಳಾಪುರ: ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ ಲಾರಿಗಳು

0

ಚಿಕ್ಕಬಳ್ಳಾಪುರ:  ತಾಲ್ಲೂಕಿನ ಹೂನೇಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಿಎನ್ ಜಿ ಸಿಲಿಂಡರ್ ಗಳು ತುಂಬಿದ್ದ ಲಾರಿಗೆ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಎರಡೂ ಲಾರಿಗಳು ಹೊತ್ತಿ ಉರಿದಿದೆ.

Join Our Whatsapp Group

ಶುಕ್ರವಾರ ನಡುರಾತ್ರಿ ಸಿಲಿಂಡರ್ ತುಂಬಿದ್ದ ಲಾರಿ ಹೂನೇಗಲ್ ಗೇಟ್ ನಲ್ಲಿ ತಿರುವು ಪಡೆಯುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಗ್ರಾನೈಟ್ ಲಾರಿ ಡಿಕ್ಕಿಯಾಗಿದೆ.

ಸಿಲಿಂಡರ್ ಲಾರಿ ಚಾಲಕ ನರಸಿಂಹಮೂರ್ತಿ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಗಳು ಹೊತ್ತಿ ಉರಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.