ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುತ್ತಿದ್ದ ವೇಳೆ ಅದರಿಂದ ಹೊರಬಂದ ಭಾರೀ ಪ್ರಮಾಣದ ಶಾಖದಿಂದ ರಿಪೇರಿ ಮಾಡುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ನಗರ ಹೊರವಲಯ ವಿದ್ಯಾ ಕಾಫಿ ಕ್ಯೂರಿಂಗ್ ನಲ್ಲಿ ಘಟನೆ ನಡೆದಿದ್ದು ಬಾಯ್ಲರ್ ರಿಪೇರಿ ಮಾಡುತ್ತಿದ್ದ ಮಡಿಕೇರಿ ಕುಶಾಲನಗರದ ಯುವಕ ಉದಯ್ (27) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಶಾಖದ ತೀವ್ರತೆಗೆ ಯುವಕನ ದೇಹ ಸುಟ್ಟು ಕರಕಲಾಗಿದೆ.
ನಗರದ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿದೆ.
ಬಾಯ್ಲರ್ ಸರಿಪಡಿಸುವಾಗ ಏಕಾಏಕಿ ಹೊರ ಬಂದ 340 ಡಿಗ್ರಿ ಶಾಖ ಹೊರಬಂದ ಪರಿಣಾಮ ಘಟನೆ ನಡೆದಿದೆ. ಮಗನನ್ನು ಕಳೆದುಕೊಂಡ ತಾಯಿ ಶವಗಾರದ ಬಳಿ ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿತ್ತು.