ಮೈಸೂರು : ಭಾರತದಲ್ಲಿ ಹೆಚ್ಚಿನವರು ವಿದ್ಯಾವಂತರೆ . ಈ ಬಾಲ ಕಾರ್ಮಿಕ ಪದ್ದತಿ ವಿರುದ್ಧ ಹೋರಾಡುವ ಹಾಗೂ ಅದನ್ನು ನಿರ್ಮೂಲನೆ ಮಾಡುವ ಕೆಲಸವಾಗಬೇಕು . ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅಮರನಾಥ್ ಕೆ . ಕೆ ಅವರು ಹೇಳಿದರು .
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ , ಪೊಲೀಸ್ ಇಲಾಖೆ , ಸಮಾಜ ಕಲ್ಯಾಣ ಇಲಾಖೆ , ಕಾರ್ಮಿಕ ಇಲಾಖೆ , ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ , ಮಕ್ಕಳ ಸಹಾಯವಾಣಿ 1098 ಹಾಗೂ ಸ್ವಯಂ ಸೇವಾ ಸಂಸ್ಥೆ ಸೇವಾ ಸಂಸ್ಥೆಗಳು , ಮೈಸೂರು . ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾರಾಜ ಪದವಿಪೂರ್ವ ( ವೈದ್ಯಕೀಯಶಾಲಾ ವಿಭಾಗ ) ದಲ್ಲಿ ನಡೆಯುತ್ತಿದ್ದ “ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ” ಯನ್ನು ಉದ್ಘಾಟಿಸಿ .
‘ ಶಿಕ್ಷಣದಿಂದ ವಂಚಿತ ಮದುವೆ : ಮಕ್ಕಳ ಕಾರ್ಮಿಕ ಚಟುವಟಿಕೆ ಮಾಡಲಾಗುತ್ತಿದೆ . ಮಕ್ಕಳ ದುಡಿಮೆಯಿಂದ ಕುಟುಂಬ ನಿರ್ವಹಣೆಯಂತಹ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ . ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ . ಇದರ ನಿರ್ಮೂಲನೆಗಾಗಿ ಭಾರತದ ಸಂವಿಧಾನದಲ್ಲಿ 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೊಳಿಸಿದೆ ಎಂದು ಹೇಳಿದರು .
ತಂದೆ ತಾಯಿಯಾದರೂ ಕೂಡ ಚಿಕ್ಕವಯಸ್ಸಿನಲ್ಲಿ ದುಡಿಯುವ ರೀತಿಯ ಮಕ್ಕಳನ್ನು ಬೆಳೆದಿರುವುದು , ಬಡತನ ಇದೆ ಎಂದು ಕೆಲಸ ಮಾಡಲು ಸೇರಿಕೊಂಡು ದುಡಿಯುವಂತದ್ದು , ಹೀಗೆ ಎಷ್ಟೋ ಮಕ್ಕಳು ಶಾಲೆಗಳಿಗೆ ಹೋಗದೆ ತಮ್ಮ ಸುಂದರವಾದ ಬಾಲ್ಯದ ದಿನಗಳನ್ನು ಸಹ ಒಳಗೊಂಡಿದೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು .
ಬಾಲಕ ಕಾರ್ಮಿಕರನ್ನು ನೇಮಿಸಿಕೊಂಡು ಅಪಾಯಕಾರಿ ಉದ್ದಿಮೆಯಲ್ಲಿ ದುಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ 20.00/- ದಂಡ ವಸೂಲಾತಿ ಮಾಡಿಸಿಕೊಂಡು . ಹಾಗೂ ಅವರಿಗೆ 6 ತಿಂಗಳಿನಿ o ದ 2 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು . ಅದರ ಜೊತೆಗೆ ಒಂದು ಲಕ್ಷ ರೂಪಾಯಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು .
ಬಾಲ ಕಾರ್ಮಿಕ ಅಪರಾಧಕ್ಕೆ ಸಂಬ ಒ ಧಿಸಿದ ಓ ಮಕ್ಕಳಿಗಾಗಿ ಸಂವಿಧಾನದಲ್ಲಿ 27 ಕಾಯ್ದೆಗಳು , 2 ಕಾಯ್ದೆ , 3 ನೇ ಕಾಯ್ದೆ ಹಾಗೂ 14 ನೇ ಕಾಯ್ದೆ ಪ್ರಮುಖ ಪಾತ್ರವಹಿಸುತ್ತದೆ . ಪ್ರಕರಣ ಸಾಭಿತಾದಲ್ಲಿ ಅಪರಾಧಿಗಳಿಗೆ ಕನಿಷ್ಠ 10 ಸಾವಿರ ರೂ . ದಂಡ ಹಾಗೂ 3 ತಿಂಗಳ ಕಠಿಣ ಶಿಫಾರಸು ಮಾಡಲಾಗಿದೆ .ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಭವಿಷ್ಯ ಸರ್ವ ನಾಶವಾಗುತ್ತದೆ . ಶಿಕ್ಷಣದಿಂದ ವಂಚಿತರಾಗುತ್ತಾರೆ , ದೈಹಿಕವಾಗಿ , ಮಾನಸಿಕವಾಗಿ ಕುಂಟಿತರಾಗಿ ಕೆಟ್ಟ ಪರಿಣಾಮ . ಹೀಗಾಗಿ ಈ ಮನಸ್ಥಿಗಳನ್ನು ಬದಲಾಯಿಸುವ , ಜಾಗೃತಿ ಮೂಡಿಸುವ , ಎಚ್ಚರಿಸುವ ಕೆಲಸವಾಗಬೇಕು ಎಂದು ಹೇಳಿದರು .
ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಸದಸ್ಯ ಕಾರ್ಯದರ್ಶಿಗಳಾದ ವೀಣಾ ಎಸ್ . ಆರ್ . ಅವರು ಮಾತನಾಡಿ ಮಕ್ಕಳ ಮುಂದಿನ ಸ್ವಪ್ರಜೆಗಳು ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು . ಅದನ್ನು ಬಿಟ್ಟು ಕೆಲಸದ ಕಡೆ ಗಮನ ಬಾರದಂತೆ ಮಕ್ಕಳಿಗೆ ಹೆಚ್ಚಾಗಿ ಪ್ರೋತ್ಸಾಹವನ್ನು ಕೊಡಬೇಕು . ಬಾಲ್ಯದಲ್ಲೇ ವಿದ್ಯಾಭ್ಯಾಸವನ್ನು ಚಿವುಟಬಾರದು . ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಒತ್ತು ನೀಡುವಂತೆ ಪ್ರೋತ್ಸಾಹ ನೀಡಲಾಯಿತು ಎಂದು ಹೇಳಿದರು .
ಅಂತಹ ಮಕ್ಕಳು ಎಲ್ಲಿಯೇ ಕಂಡು ಬಂದರೂ ಸಹ ಅವರಿಗೆ ಶಾಲಾ ಕಾಲೇಜುಗಳಿಗೆ ಸೇರಿಸುವಂತಹ ಒಂದು ಪ್ರವೃತ್ತಿಯನ್ನು ನಾವು ಸಹ ಬೆಳಸಿಕೊಳ್ಳಬೇಕು . ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಯಂತ್ರಣ ಕಾಯ್ದೆ 1986 ರ ಅಡಿಯಲ್ಲಿ 14 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ ಮಕ್ಕಳನ್ನು ದುಡಿಮೆಗೆ ಬಳಸಬಾರದು ಅಂತಹ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ಅದು ಅಪರಾಧ ಎಂದು ಸ್ಥಾಪಿಸಲಾಗಿದೆ .
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲ ಎನ್ . ಸುಂದರ್ ರಾಜ್ ಅವರು ‘ ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ 1986 ರ ಕುರಿತು ಕಾನೂನು ಅರಿವು ಮೂಡಿಸಿ ಅವರು ಮಾತನಾಡಿದರು ” ಕೆಲವು ವರದಿಗಳ ಪ್ರಕಾರ ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಕಾರಣ , ಬಡತನ ಹಾಗೂ ಅನಕ್ಷತೆಯಿಂದ ಈ ಪ್ರಕರಣಗಳು ಹೆಚ್ಚಾಗಿವೆ . ಕೈಲಾಶ್ ಸತ್ಯಾರ್ಥಿ ಅವರು ದೇಶದಾದ್ಯಂತ ಬ್ಯಾಚ್ ಪನ್ ಬಚಾವ್ ಎಂಬ ಆಂದೋಲನ ಕೈಗೊಂಡಿದ್ದರು . ಇದರ ಅಂಗವಾಗಿ ದೇಶದಾಧ್ಯಂತ 45 ಲಕ್ಷ ಮಕ್ಕಳ ಬಾಲ ಕಾರ್ಮಿಕರಿಂದ ಹೊರತಂದರು . ಅವರಿಗೆ 2014 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ . ಎಂದು ಮಾಡಿದರು .
ಸಂವಿಧಾನದ 24 ನೇ ವಿಧಿಯ 14 ವರ್ಷದ ಒಳಗಿನ ಕೆಲಸಕ್ಕೆ ಯಾವುದೇ ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳಬಾರದು . 21 ಎ ವಿಧಿಯ ಪ್ರಕಾರ ಸರ್ಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ . 45 ನೇ ವಿಧಿಯು 6 ವರ್ಷ ಒಳಗಿನ ಮಕ್ಕಳಿಗೆ ಸರ್ಕಾರ ಕಡ್ಡಾಯವಾಗಿ ಪೌಷ್ಠಿಕ ಆಹಾರ ಪದ್ಧತಿ ಎಂದು ಸರ್ಕಾರವನ್ನು ಸಮಾಜವನ್ನು ಸಂವಿಧಾನ ಮಕ್ಕಳ ಹಕ್ಕಿಗಾಗಿ ಪರಿಶೀಲಿಸುತ್ತಿದೆ . ಸಂವಿಧಾನದಲ್ಲಿ ಒಟ್ಟು ಮಕ್ಕಳಿಗಾಗಿ 27 ಕಾನೂನುಗಳನ್ನು ಒಳಗೊಂಡಿದೆ . ಆದರೆ ದೇಶದಲ್ಲಿ ಹೆಚ್ಚಿನ ಮಕ್ಕಳಿಗೆ ಹಾಗೂ ಪೋಷಕರಿಗೆ ಈ ಕಾನೂನಿನ ಅರಿವುಗಳಿಲ್ಲ .
ಇ ಎ ದು ಬಾಲ ಅಪರಾಧಿ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ . ಇದಲ್ಲದೇ ಭಾರತದಲ್ಲಿ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಅಪಾರ ಪ್ರಮಾಣದಲ್ಲಿ ಕಾಣಸಿಗುತ್ತಿವೆ . ಜಿಲ್ಲಾ ನ್ಯಾಯಾಲಯಗಳಲ್ಲಿ ಇಂತಹ ದೌರ್ಜನ್ಯಗಳು 900 ಪ್ರಕರಣಗಳು ದಾಖಲಾಗಿವೆ . ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವಾದರೂ ಕೃತ್ಯಗಳು ನಡೆಯುತ್ತಿವೆ , ಸಮಾಜವೇ ತಲೆ ತಗ್ಗಿಸುವಂತಹ ನೀಚ ಕೃತ್ಯಗಳು ಎಂದು ಹೇಳಿದರು .
1986 ಕಾಯ್ದೆ ನಂತರ 2016 ರಲ್ಲಿ ಬಾಲ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆಗೆ ತಿದ್ದು ಪಡಿ ಮಾಡಲಾಗಿತ್ತು , 18 ವರ್ಷ ಒಳಗಿನವರನ್ನು ಮಕ್ಕಳೆಂದು , 14 ವರ್ಷ ಒಳಗಿನ ಮಕ್ಕಳ ಹರೆಯದ ಮಕ್ಕಳೆಂದು ಪರಿಗಣಿಸಲಾಗಿದೆ . ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಳಸಿಕೊಳ್ಳದಂತೆ ಪ್ರತಿಯೊಬ್ಬರು ಸಮಾಜವನ್ನು ಎಚ್ಚರಿಸುವ , ತಿಳಿ ಹೇಳುವ ಕೆಲಸ ಮಾಡಿ ಮಕ್ಕಳು ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಕೆಲಸವಾಗಬೇಕು ಎಂದರು .
ಕಾರ್ಯಕ್ರಮದಲ್ಲಿ ಮೈಸೂರು ಉಪವಿಭಾಗ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ , ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಉದುಂ ಶಂಕರ್ , ಉಪ ಪ್ರಾಂಶುಪಾಲ ಮಹೇಶ್ ., ಇ . ಎಸ್ . ಐ . ಆಸ್ಪತ್ರೆಯ ವೈದ್ಯಾಧಿಕಾರಿ ಡಾ . ಶಶಿಕಲಾ , ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರವಿಚಂದ್ರ , ಡಾನ್ ಬಾಸ್ಕೋ ಮಕ್ಕಳಾಲಯದ ಜಿಮ್ ಜೋಸ್ , ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ ಯೋಜನಾಧಿಕಾರಿ ಎಚ್ . ಪಿ . ಮಡಿಲು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಶ್ರೀನಿವಾಸ್ ಮಲ್ಲಿಕಾರ್ಜುನ ಸೇರಿದಂತೆ .















