ಮನೆ ಜ್ಯೋತಿಷ್ಯ ಮೇಯಲ್ಲಿ ಜನಿಸಿದ ಮಕ್ಕಳು ಈ ಅದೃಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ..!

ಮೇಯಲ್ಲಿ ಜನಿಸಿದ ಮಕ್ಕಳು ಈ ಅದೃಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ..!

0

ಮೇ ತಿಂಗಳು ಒಂದು ರೀತಿಯಲ್ಲಿ ಸಾಧಕರ ಜನನದ ಗುಣಗಾನ ಮಾಡುವ ಮಾಸ ಎಂದರೆ ತಪ್ಪಾಗಲಾರದು. ಗುರು ರವೀಂದ್ರನಾಥ ಟ್ಯಾಗೋರ್, ರಾಣಿ ವಿಕ್ಟೋರಿಯಾ, ಗೀತರಚನೆಕಾರ ಬಾಬ್ ಡೈಲನ್, ನಟ ಜಾನ್ ವೇಯ್ನ್ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಮೇ ತಿಂಗಳಲ್ಲಿ ಜನಿಸಿದರು. ಅಲ್ಲದೆ ಈ ತಿಂಗಳು ಉಪವಾಸ, ಆರಾಧನೆ ಎಲ್ಲವನ್ನೂ ಒಳಗೊಂಡಿದೆ.  ಇತರ ತಿಂಗಳುಗಳಲ್ಲಿ ಜನಿಸಿದವರಂತೆ, ಮೇ ತಿಂಗಳಲ್ಲಿ ಜನಿಸಿದವರು ವಿಶಿಷ್ಟ ಗುಣಲಕ್ಷಣಗಳು ಹೊಂದಿರುತ್ತಾರೆ.

Join Our Whatsapp Group

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಜನಿಸಿದವರು ವೃಷಭ ಮತ್ತು ಮಿಥುನ ರಾಶಿಯವರಾಗಿರುತ್ತಾರೆ. ಮೇ 20 ರವರೆಗೆ ಜನಿಸಿದವರು ವೃಷಭ ರಾಶಿ ಮತ್ತು ಮೇ 21ರ ನಂತರ ಜನಿಸಿದವರು ಮಿಥುನ ರಾಶಿಯ ಅಡಿಯಲ್ಲಿ ಬರುತ್ತಾರೆ.

ಮೇ ತಿಂಗಳಲ್ಲಿ ಜನಿಸಿದ ಮಕ್ಕಳನ್ನು ಅದೃಷ್ಟವಂತರೆಂದು ಹೇಳಲಾಗುತ್ತದೆ ಮತ್ತು ಯಶಸ್ಸು ಅಧಿಕವಾಗಿ ಅವರನ್ನೇ ಆಶೀರ್ವದಿಸಿದಂತಹ ದೈವಿ ಪುತ್ರರು. ಅವರು ಯಾವಾಗಲೂ ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿರುವವರಾಗಿದ್ದು ವೈಫಲ್ಯಗಳ ಬಗ್ಗೆ ಎಂದಿಗೂ ಮಂಕಾಗಿರುವುದಿಲ್ಲ. ಬಹುಶಃ ಇದಕ್ಕಾಗಿಯೇ ಅವರಿಗೆ ಯಶಸ್ಸು ಸುಲಭವಾಗಿ ಕೈಗೆಟಕುವುದು.

ಮೇನಲ್ಲಿ ಜನಿಸಿದ ಮಕ್ಕಳ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅವರು ತಮ್ಮ ಕೆಲಸದ ಕಡೆಗೆ ವ್ಯವಸ್ಥಿತವಾಗಿರುತ್ತಾರೆ. ಅವರಿಗೆ ಒಂದು ಕೆಲಸವನ್ನು ನೀಡಿದರೆ, ಅದನ್ನು ನೀವು ವಿಶಿಷ್ಟವಾಗಿ ಮಾಡಬಹುದು ಎಂದು ಅಂದ್ಕೊಂಡಿದ್ದರೆ, ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ.  ಅವರ ಕೆಲಸದ ವಿಧಾನವೇ ಹಾಗೇ  ಅವರನ್ನು ಇತರರಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತದೆ. ಅಂದರೆ ಅವರು ಮಾಡಿದ ಕೆಲಸ ಮಾತಾಡುತ್ತದೆ ಎನ್ನುವ ರೀತಿ ಅವರ ಕಾರ್ಯ ಅಚ್ಚುಕಟ್ಟಾಗಿರುತ್ತದೆ.

ಮೇನಲ್ಲಿ ಹುಟ್ಟಿದ ಮಕ್ಕಳು ಮುಕ್ತ  ಸ್ವಭಾವದವರಾಗಿರುತ್ತಾರೆ ಮತ್ತು ಯಾವುದೇ ಕೆಲಸಕ್ಕೂ ಹಿಂಜರಿಯುವುದಿಲ್ಲ. ಮನೆಯವರಿಗೆ ಅಥವಾ ಗೆಳೆಯರ ಬಳಗಕ್ಕೆ ಜೀವ ತುಂಬುತ್ತಾರೆ ಮತ್ತು ಎಲ್ಲರನ್ನೂ ಪ್ರೀತಿಸುವ ಮನೋಭಾವದವರು.  ಈ ರೀತಿಯ ವ್ಯಕ್ತಿತ್ವದಿಂದಾಗಿ ಅವರ ಸ್ನೇಹಿತರು ಪ್ರೀತಿಪಾತ್ರರಾಗಿ ಕಾಣುತ್ತಾರೆ. ಯಾವುದೇ ಕೆಲಸವನ್ನಾದರೂ ಯೋಚಿಸಿ, ಆ ಕೆಲಸವನ್ನು ಹೇಗೆ ಮುಂದುವರಿಸಬೇಕೆಂದು ನಿಖರವಾಗಿ ಮುನ್ನಡೆಸುತ್ತಾರೆ. ಯಾವುದೇ ಆತುರಕ್ಕೆ ಬಿದ್ದು ಕೆಲಸ ಕೈ ಬಿಡುವವರಲ್ಲ.

ಮೇಯಲ್ಲಿ ಜನಿಸಿದ ಮಕ್ಕಳು ಸಾಹಸ ಮತ್ತು ವಿನೋದವನ್ನು ಇಷ್ಟಪಡುವವರಾಗಿದ್ದಾರೆ. ಕೆಲಸವನ್ನು ಹೇಗೆ ಯೋಜಿತ ರೀತಿಯಲ್ಲಿ ಮಾಡಿ ಮುಗಿಸುತ್ತಾರೋ ಹಾಗೆಯೇ ಸಾಹಸಯುಕ್ತ ಕ್ರೀಡೆ, ಮತ್ತು ತಾವಿರುವ ಎಲ್ಲ ಕಡೆಯೂ ನಗುವಿರಬೇಕು ಎಂದು ಆಶಿಸುವವರು. ಹುಟ್ಟಿನಿಂದಲೇ ಅವರು ಹೊಸ ಹೊಸ ಸ್ಥಳಗಳ ಬಗ್ಗೆ ವಿಶೇಷವಾಗಿ ಕಾಣುತ್ತಾರೆ.

ಬುಧ ಗ್ರಹದ ಶ್ರೀರಕ್ಷೆಯಲ್ಲಿ  ಜನಿಸಿದ ಮಕ್ಕಳು ತುಂಬಾ ಸೃಜನಶೀಲರು, ಬುದ್ಧಿವಂತರು ಮತ್ತು ಉತ್ತಮ ಸಂಭಾಷಣಾವಾದಿಯಾಗುತ್ತಾರೆ. ಈ ಮಕ್ಕಳು ಬಹುಮುಖ ಪ್ರತಿಭೆ. ಯಾವಾಗಲೂ ಹೊಸ ವ ಪ್ರಯತ್ನಿಸುವಾಗ ಹಿಂಜರಿಯುವುದಿಲ್ಲ.  

ಬದ್ಧತೆ ಮತ್ತು ಸಮರ್ಪಣೆಗೆ ಮೇಯಲ್ಲಿ ಹುಟ್ಟಿದವರು ದೊಡ್ಡ ಸಾಕ್ಷಿಯಾಗಿರುತ್ತಾರೆ. ಕುರುಡು ಪ್ರೀತಿಯಲ್ಲಿ ಬೀಳಲು ಹಿಂಜರಿಯುತ್ತಾರೆ ಮತ್ತು  ದೀರ್ಘಕಾಲೀನ ಸಂಬಂಧಗಳಲ್ಲಿರಲು ಮಾತ್ರ ಇಷ್ಟಪಡುತ್ತಾರೆ.

ಮೇ ತಿಂಗಳಲ್ಲಿ ಜನಿಸಿದವರು ಕೃಷಿ, ಹಣಕಾಸು, ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ಕೆಲಸಗಳು, ಫ್ಯಾಷನ್ ಡಿಸೈನಿಂಗ್, ಕ್ಯಾಟರಿಂಗ್, ಒಳಾಂಗಣ ಅಲಂಕಾರ, ಜಾಹೀರಾತು, ಕಟ್ಟಡ ಗುತ್ತಿಗೆದಾರ, ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ನಲ್ಲಿ ಉತ್ತಮ ಸಾಧನೆ ಮಾಡಬಹುದು.