ಮನೆ ಸುದ್ದಿ ಜಾಲ ಮಕ್ಕಳಿಗೆ ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮುನ್ನ ಪೋಷಕರ ಲಿಖಿತ ಅನುಮತಿ ಪಡೆಯಬೇಕು: ಶಿಕ್ಷಣ ಇಲಾಖೆ ಆದೇಶ

ಮಕ್ಕಳಿಗೆ ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮುನ್ನ ಪೋಷಕರ ಲಿಖಿತ ಅನುಮತಿ ಪಡೆಯಬೇಕು: ಶಿಕ್ಷಣ ಇಲಾಖೆ ಆದೇಶ

0

ಭೂಪಾಲ್: ಡಿಸೆಂಬರ್ 25 ರಂದು ಕ್ರಿಸ್‌ಮಸ್ ಹಬ್ಬಕ್ಕೆ ಮುಂಚಿತವಾಗಿ ಶಾಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅನೇಕ ಶಾಲೆಗಳು ಕ್ರಿಶ್ಚಿಯನ್ ಹಬ್ಬಗಳ ಸಂದರ್ಭದಲ್ಲಿ ಸಾಂಟಾ ಕ್ಲಾಸ್ ವೇಷಭೂಷಣವನ್ನು ಮಕ್ಕಳಿಗೆ ತೊಡಿಸಿ,ಕಾರ್ಯಕ್ರಮವನ್ನು ಆಯೋಜಿಸುವುದುಂಟು.

ಆದರೆ, ಖಾಸಗಿ ಶಾಲೆಗಳು ಈ ಉಡುಗೆ ತೊಡಿಸುವ ಮುನ್ನ ಪೋಷಕರಿಂದ ಲಿಖಿತ ಅನುಮತಿ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕುಟುಂಬದವರ ಅನುಮತಿ ಪಡೆಯದೆ ಮಕ್ಕಳು ಇಂತಹ ಉಡುಗೆ ತೊಟ್ಟರೆ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಶಾಲೆಯ ಕ್ರಿಸ್ಮಸ್ ಈವೆಂಟ್‌ಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಸಾಂಟಾ ಕ್ಲಾಸ್‌ನಂತೆ ವೇಷ ಧರಿಸುತ್ತಾರೆ. ಆದರೆ, ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಇದರ ಪ್ರಕಾರ ಕ್ರಿಸ್ ಮಸ್ ಹಬ್ಬದಂದು ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮುನ್ನ ಪೋಷಕರ ಲಿಖಿತ ಅನುಮತಿ ಪಡೆಯಬೇಕು ಎಂದು ಖಾಸಗಿ ಶಾಲೆಗಳು ಎಲ್ಲಾ ಸರ್ಕಾರೇತರ ಸಂಸ್ಥೆಗಳಿಗೆ ಪತ್ರ ನೀಡಿವೆ.

ಜಿಲ್ಲಾ ಶಿಕ್ಷಣಾಧಿಕಾರಿ ವಿವೇಕ್ ದುಬೆ ಅವರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಪೋಷಕರ ಅನುಮತಿಯಿಲ್ಲದೆ ಯಾವುದೇ ಶಾಲಾ ಆಡಳಿತ ಮಂಡಳಿಯು ಸಾಂತಾಕ್ಲಾಸ್ ವೇಷಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ . ಪೋಷಕರ ಅನುಮತಿ ಇಲ್ಲದೆ ಮಕ್ಕಳಿಗೆ ವೇಷ ತೊಡಿಸುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಶಾಲೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಣ ಇಲಾಖೆಯ ಈ ಪತ್ರವನ್ನು ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಿಗೂ ನೀಡಲಾಗಿದೆ. ಈವೆಂಟ್‌ಗಾಗಿ ವಿಶೇಷ ಹಬ್ಬದ ಉಡುಪನ್ನು ಧರಿಸಲು ಮಕ್ಕಳನ್ನು ಒತ್ತಾಯಿಸಲಾಗುತ್ತದೆ. ಇದು ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹಾಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ವಿಶ್ವ ಹಿಂದೂ ಪರಿಷತ್ ಕೂಡ ಈ ಕುರಿತು ಶಾಲೆಗಳಿಗೆ ಪತ್ರ ಬರೆದಿದೆ.

ಹಿಂದಿನ ಲೇಖನನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕನ್ನು ವಂಚಿಸಿರುವ ಆರೋಪದಲ್ಲಿ ರಾಕ್​ಲೈನ್ ವೆಂಕಟೇಶ್ ಮಗನ ವಿಚಾರಣೆ
ಮುಂದಿನ ಲೇಖನಕಾಡುಗೊಲ್ಲ ಸಮುದಾಯವನ್ನು ಎಸ್​ಟಿಗೆ ಸೇರಿಸುವ ವಿಚಾರ: ಮಾಜಿ ಪ್ರಧಾನಿ ದೇವೇಗೌಡರ ಮನವಿಗೆ ಕೇಂದ್ರ ಸರ್ಕಾರ ಸ್ಪಂದನೆ