ಮನೆ ಕಾನೂನು ಮೃತನ ವಿವಾಹೇತರ ಸಂಬಂಧದ ಮಕ್ಕಳಿಗೂ ಪರಿಹಾರದ ಹಕ್ಕಿದೆ : ಹೈಕೋರ್ಟ್

ಮೃತನ ವಿವಾಹೇತರ ಸಂಬಂಧದ ಮಕ್ಕಳಿಗೂ ಪರಿಹಾರದ ಹಕ್ಕಿದೆ : ಹೈಕೋರ್ಟ್

0

ಬೆಂಗಳೂರು(Bengaluru): ಮೋಟಾರು ವಾಹನ ಅಪಘಾತದಂತ ಪ್ರಕರಣದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದ ಹಕ್ಕಿಲ್ಲ. ಆದರೇ ಮೃತನ ವಿವಾಹೇತರ ಸಂಬಂಧದ ಸಂತಾನಕ್ಕೆ ಪರಿಹಾರದ ಹಕ್ಕಿದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್  ಆದೇಶದಲ್ಲಿ ತಿಳಿಸಿದೆ.

2012ರಲ್ಲಿ ಮೋಟಾರು ವಾಹನ ಅಪಘಾತದಲ್ಲಿ ಮಲ್ಲಿಕಾರ್ಜುನ ಎಂಬುವರು ಮೃತಪಟ್ಟಿದ್ದರು. ಪರಿಹಾರ ನೀಡದ ವಿಮಾ ಕಂಪನಿಯಿಂದ ಪರಿಹಾರ ಕೋರಿ ಹೈಕೋರ್ಟ್’ಗೆ ಮೃತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆ, ಪುತ್ರ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ನ್ಯಾಯಪೀಠವು, ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದಲ್ಲಿ ಹಕ್ಕಿಲ್ಲ. ಆದರೆ ಆ ಸಂಬಂಧಕ್ಕೆ ಹುಟ್ಟಿದ ಪುತ್ರನಿಗೆ ಪರಿಹಾರದಲ್ಲಿ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟರು.

ಇನ್ನೂ ಮೃತ ತಂದೆ-ತಾಯಿಗೆ ಪರಿಹಾರದಲ್ಲಿ ತಲಾ ಶೇ.30ರಷ್ಟು ನೀಡಬೇಕು. ಮೃತ ಪುತ್ರನಿಗೆ ಪರಿಹಾರದಲ್ಲಿ ಶೇ.40ರಷ್ಟು ನೀಡಬೇಕು ಎಂಬುದಾಗಿ ವಿಮಾ ಕಂಪನಿಗೆ ಹೈಕೋರ್ಟ್ ಏಕ ಸದಸ್ಯ ಪೀಠವು ನಿರ್ದೇಶನ ನೀಡಿತು.

ಹಿಂದಿನ ಲೇಖನಪತಿಯ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ: ಒಂದೂವರೆ ವರ್ಷದ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ
ಮುಂದಿನ ಲೇಖನಪಂಚಮಸಾಲಿಗೆ 2ಎ ಮೀಸಲಾತಿ: ಹಿಂದುಳಿದ ಆಯೋಗದ ವರದಿ ಆಧರಿಸಿ ಕ್ರಮ- ಸಿಎಂ ಬೊಮ್ಮಾಯಿ