ಮನೆ ಮನರಂಜನೆ ಮಕ್ಕಳ ಚಿತ್ರ ‘ದೇವರ ಕನಸು’ ಜು.21 ರಂದು ತೆರೆಗೆ

ಮಕ್ಕಳ ಚಿತ್ರ ‘ದೇವರ ಕನಸು’ ಜು.21 ರಂದು ತೆರೆಗೆ

0

“ದೇವರ ಕನಸು’ ಎಂಬ ಮಕ್ಕಳ ಚಿತ್ರ ಜು.21ರಂದು ತೆರೆಕಾಣುತ್ತಿದೆ. ಈ ಚಿತ್ರ ಮೂವತ್ತಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಅನ್ನು ಅಶ್ವಿ‌ನಿ ಪುನೀತ್‌ ರಾಜ್‌ ಕುಮಾರ್‌ ಬಿಡುಗಡೆ ಮಾಡಿ ಶುಭಕೋರಿದರು.

Join Our Whatsapp Group

ಸುರೇಶ್‌ ಲಕ್ಕೂರ್‌ ಈ ಚಿತ್ರದ ನಿರ್ದೇಶಕರು.

“ದೇವರ ಕನಸು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಮಕ್ಕಳ ಚಿತ್ರ ಈಗಾಗಲೇ ಪ್ರತಿಷ್ಠಿತ ಕಾನ್ಸ್‌ ಫಿಲಂ ಫೆಸ್ಟಿವಲ್‌ ಸೇರಿದಂತೆ ಅನೇಕ ಫಿಲಂ ಫೆಸ್ಟಿವಲ್‌ ಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ. ದೇವ ಎನ್ನುವುದು ಈ ಚಿತ್ರದ ಮುಖ್ಯ ಪಾತ್ರಧಾರಿಯ ಹೆಸರು. ಈ ಪಾತ್ರದಲ್ಲಿ ಮಾಸ್ಟರ್‌ ದೀಪಕ್‌ ಅಭಿನಯಿಸಿದ್ದಾರೆ. ಈ ಹುಡುಗ ಕಾಣುವ ಕನಸು ಈಡೇರುತ್ತದೋ, ಇಲ್ಲವೋ? ಎಂಬುದು ಕಥಾಹಂದರ. ದೀಪಕ್‌, ಅಮೂಲ್ಯ, ಅರುಷಿ ವೇದಿಕ ಹಾಗೂ ಮಾಕ್‌ ಮಣಿ ಚಿತ್ರದ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 21 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಮಾಹಿತಿ ನೀಡಿದರು ಸುರೇಶ್‌.

ನಿರ್ಮಾಪಕರಾದ ಜಯ್‌ ಕುಮಾರ್‌, ಶೇಖರ್‌, ಕಥೆ ಬರೆದಿರುವ ಸುನೀಲ್‌ ರಾಮ್, ಹಾಡುಗಳು ಹಾಗೂ ಸಂಭಾಷಣೆ ರಚಿಸಿರುವ ಲಿಂಗರಾಜ್‌ ಇತಿಹಾಸ, ಸಂಗೀತ ನಿರ್ದೇಶಕ ಸ್ಯಾಂಡಿ ಹಾಗೂ ಚಿತ್ರದಲ್ಲಿ ನಟಿಸಿರುವ ಮಾಸ್ಟರ್‌ ದೀಪಕ್‌, ಬೇಬಿ ಅಮೂಲ್ಯ, ಅರುಷಿ ವೇದಿಕ, ಮಾಕ್‌ ಮಣಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಹಿಂದಿನ ಲೇಖನಹ್ಯುಂಡೈ ಮೋಟಾರ್ಸ್‌- ಎಸ್‌ ಯುವಿ ಹ್ಯುಂಡೈ ಎಕ್ಸ್‌ ಟರ್‌ ಬಿಡುಗಡೆ
ಮುಂದಿನ ಲೇಖನಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ