ಮನೆ ಜ್ಯೋತಿಷ್ಯ ಮಕ್ಕಳ ಫಲ ವಿಚಾರ

ಮಕ್ಕಳ ಫಲ ವಿಚಾರ

0

ಸ್ತ್ರೀಯಳು ರಜಸ್ವಲೆಯಾದ ನಾಲ್ಕನೇ ರಾತ್ರಿಯಲ್ಲಿ ಸ್ತ್ರೀಯಳನ್ನು  ಕೂಡಲು ಅಲ್ಪಾಯುಷ್ಯುಳ್ಳವನೂ, ದಾರಿದ್ರನೂ, ಸೋಮಾರಿಯೂ ಆದ ಮಗುನು ಹುಟ್ಟುವನು. ಇದರಂತೆ ಐದನೇ ರಾತ್ರಿಯಲ್ಲಿ ಸ್ತ್ರೀಯಳನ್ನು ಕೂಡಲು ಸಂತಾನಾಭಿವೃದ್ಧಿಯುಳ್ಳ ಮಗಳೂ, 6ನೇ ರಾತ್ರಿಯಲ್ಲಿ ಕೂಡಲೂ ಸಂಪನ್ನ ಅವಿದ್ಯಾವಂತ ಬಹು ಮಕ್ಕಳುಳ್ಳ ಮಗನೂ ಏಳನೇ ರಾತ್ರಿಯಲ್ಲಿ ಕೂಡಲೂ ಬಂಜೆತನ ಅನುಭವಿಸುವ ಮಗಳೂ, 8ನೇ ರಾತ್ರಿಯಲ್ಲಿ ಕೂಡಲು  ಮರ್ಯಾದೆಗೆ ಮಹತ್ವ ಕೊಡುವ ಧರ್ಮವಂತ,ಭಕ್ತಿವಂತ ಮಗನು ಹುಟ್ಟುವನು.

Join Our Whatsapp Group

9 ರಾತ್ರಿಯಲ್ಲಿ ಕೂಡಿದರೆ ಆ ದಂಪತಿಗಳಿಗೆ ಸಕಲ ಸೌಭಾಗ್ಯವನ್ನು ಹೊಂದಿದ ಮಗಳೂ 10ನೇ ರಾತ್ರಿಯಲ್ಲಿ ಕೂಡಿದರೆ ಗುಣವಂತನೂ ವಿದ್ಯಾವಂತನೂ ಸರ್ವರಲ್ಲಿಯೂ ಮಾನ್ಯನಾದ ಮಗನು ಹುಟ್ಟುವನು. 11ನೇ ರಾತ್ರಿಯಲ್ಲಿ ಕೂಡಿದರೆ ಅಧರ್ಮ ಅವಿಚಾರಿಯುಳ್ಳ ಮಗಳೂ 12ನೇ ರಾತ್ರಿಯಲ್ಲಿ ಕೂಡಿದರೆ ಅನೇಕ ವಿದ್ಯೆಗಳಲ್ಲಿ ಪಾರಂಗತನಾದ ಕುಲ ಶ್ರೇಷ್ಠ ಗುಣಶಾಲಿ ಮಗನು ಹುಟ್ಟುವನು. 13ನೇ ರಾತ್ರಿಯಲ್ಲಿ ಕೂಡಿದರೆ ಧರ್ಮ ನೀತಿ ಆಚಾರ ವಿಚಾರಗಳನ್ನು ತೊರೆದು ಕೇವಲ ರಾತ್ರಿಯಲ್ಲಿ ಕೂಡಿದರೆ ಧರ್ಮ  ನೀತಿ  ಆಚಾರ ವಿಚಾರಗಳನ್ನು ತೊರೆದು ಕೇವಲ ಪಾಪಕರ್ಮದಲ್ಲಿ ತೊಡಗುವ ಪುತ್ರಿಯು ಹುಟ್ಟುವಳು.

14ನೇ ರಾತ್ರಿಯಲ್ಲಿ ಕೂಡಿದರೆ ಧರ್ಮವಂತನು ರೀತಿ ನೀತಿ ಆಚಾರ ವಿಚಾರವುಳ್ಳ ಮಹಾಜ್ಞಾನಿಯೂ ಸುಸಂಪನ್ನ ಕೃತಜ್ಞತಾಭಾವನೆಯುಳ್ಳ ಮಗನು ಹುಟ್ಟುವನು. 15ನೇ ರಾತ್ರಿಯಲ್ಲಿ ಕುಡಿದರೆ ಪತಿವೃತೆಯಾದ ಹಾಗೂ ಸುಸಂಪನ್ನತೆಯಿಂದೊಡಗೂಡಿದ ಮಗಳು ಹುಟ್ಟುಗಳು  16ನೆಯ ರಾತ್ರಿಯಲ್ಲಿ ಕೂಡಿದರೆ ಸರ್ವ ಸದಾಚಾರಗಳನ್ನು ಬಲ್ಲವನೂ, ಅದರಂತೆ ನಡೆನುಡಿಯುಳ್ಳವನೂ. ಪರೋಪಕಾರಿ ಬುದ್ಧಿಯುಳ್ಳವನು.ದಾನ ಧರ್ಮದಲ್ಲಿ ನಿರತ ಬುದ್ಧಿಯುಳ್ಳವನೂ ಗುರು ಹಿರಿಯರುನ್ನು ಅದರದಿಂದ  ನೋಡುವ ಹಾಗೂ ವಂಶಕ್ಕೆ ಕೀರ್ತಿ ತರುವ ಮಗನು ಹುಟ್ಟುತ್ತಾನೆ. ಆದ್ದರಿಂದ ವಾಚಕ ಮಹಾಶಯರೇ ಯೋಗ್ಯವಾದ ರಾತ್ರಿಯಲ್ಲಿ ತನ್ನ ಸ್ತ್ರೀ ಯಳಲ್ಲಿ ಸುಮಾಗಮ ಹೊಂದಿ ಗುಣವಂತರೂ ಸದಾಚಾರಿಗಳೂ ಆದ ಮಕ್ಕಳನ್ನು ಪಡೆದು ಸುಖ ಶಾಂತಿ ಪಡೆಯಲೆಂದು ನಾವು ನಿಮಗೆ ಇಲ್ಲಿ ವಿಸ್ತಾರವಾಗಿ ವಿವರವಾಗಿ ತಿಳಿಸಿದ್ದೇವೆ.