ಮನೆ ರಾಜ್ಯ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ : ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅಮಾನತು

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ : ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅಮಾನತು

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಈ ಕುರಿತು ಆಧಿಕೃತ ಆದೇಶ ಕೂಡ ಹೊರಡಿಸಲಾಗಿದೆ.

ಕೆ. ಗೋವಿಂದರಾಜು ಅವರು ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಕೂಡ ಆಗಿದ್ದು, ಈ ಬೆಳವಣಿಗೆ ಅವರ ವಿರುದ್ಧ ಸರ್ಕಾರದ ಅಸಮಾಧಾನ ತೀವ್ರಗೊಂಡಿರುವುದನ್ನು ಸ್ಪಷ್ಟಪಡಿಸುತ್ತದೆ. ಆರ್‌ಸಿಬಿ ಚಾಂಪಿಯನ್ ಸಂಭ್ರಮಾಚರಣೆಯ ಆಯೋಜನೆಗೆ ಸಂಬಂಧಪಟ್ಟ ತ್ವರಿತ ನಿರ್ಧಾರಗಳೇ ಈ ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ಸಂಭ್ರಮಾಚರಣೆ ಕಾರ್ಯಕ್ರಮವನ್ನು ತರಾತುರಿಯಲ್ಲಿ ಯೋಜಿಸಿದ ಕಾರಣಕ್ಕೆ ಸಚಿವ ಸಂಪುಟದ ಬಹುಮಟ್ಟದ ಸದಸ್ಯರು ಗರಂ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರ ಹಿರಿಯ ಸಲಹೆಗಾರರಾಗಿದ್ದ ಕೆ. ಗೋವಿಂದರಾಜು ಅವರನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.

ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು ಹಾಗೂ ಮತ್ತಷ್ಟು ಜನ ಗಾಯಗೊಂಡಿದ್ದಾರೆ. ಜನರ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣಕ್ಕೆ ಸರ್ಕಾರದ ಕಾರ್ಯಪದ್ಧತಿ ಹಾಗೂ ಆಯೋಜನೆ ಕುರಿತು ತೀವ್ರವಾದ ಪ್ರಶ್ನೆಗಳು ಎದ್ದಿವೆ.