ಬೆಂಗಳೂರು: ಚಿಂತಾಮಣಿ, ಶಿಗ್ಗಾವಿ ಮತ್ತು ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರಗಳ ವಿವಿಧ ಪಕ್ಷಗಳ ಹಲವು ಮುಖಂಡರು, ನೂರಾರು ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಸಂಸದ, ಬಿಜೆಪಿ ನಾಯಕ ಮಂಜುನಾಥ್ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಕೂಡಾ ಕಾಂಗ್ರೆಸ್ ಸೇರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಡಿ.ಕೆ. ಶಿವ ಕುಮಾರ್, ಪ್ರಿಯಾಂಕ್ ಖರ್ಗೆ, ಸಲೀಂ ಅಹ್ಮದ್ ಸೇರಿದಂತೆ ಹಲವರು ಇದ್ದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು. ಕೆ.ಆರ್. ಪೇಟೆ, ಶಿಗ್ಗಾಂವಿ ಹಾಗೂ ಚಿಂತಾಮಣಿ ಕ್ಷೇತ್ರಗಳಿಂದ ಬಂದ ವಿವಿಧ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ಸಭಾಂಗಣ ಒಳಗೆ ಪ್ರವೇಶಿಸುವ ವೇಳೆಯಲ್ಲಿ ಭಾರೀ ನೂಕುನುಗ್ಗಲು ಉಂಟಾಯಿತು. ಕುಳಿತುಕೊಳ್ಳಲು ಹಾಕಿದ್ದ ಖುರ್ಚಿಯನ್ನೇ ಕಾರ್ಯಕರ್ತರು ಕಿತ್ತುಹಾಕಿದ ಘಟನೆ ನಡೆಯಿತು.
Saval TV on YouTube