ಮನೆ ರಾಜ್ಯ ಚಿತ್ರದುರ್ಗ: ಚಾಕೋಲೇಟ್ ಎಂದು ಮಾತ್ರೆ ಸೇವಿಸಿ 4 ವರ್ಷದ ಮಗು ಸಾವು

ಚಿತ್ರದುರ್ಗ: ಚಾಕೋಲೇಟ್ ಎಂದು ಮಾತ್ರೆ ಸೇವಿಸಿ 4 ವರ್ಷದ ಮಗು ಸಾವು

0

ಚಿತ್ರದುರ್ಗ: ಚಾಕೊಲೇಟ್​ ಎಂದು ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹೃತ್ವಿಕ್(4) ಮೃತ ರ್ದುದೈವಿ.

ಕಳೆದ 4 ದಿನಗಳ ಹಿಂದೆ ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ ಮಗುವನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು(ಮಾ.07) ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

ಇತ್ತೀಚೆಗೆ ಮೃತ ಮಗುವಿನ ತಾಯಿ ಪವಿತ್ರಾ ಎಂಬುವವರಿಗೆ ಶಸ್ತ್ರಚಿಕಿತ್ಸೆ ಆಗಿತ್ತು. ಈ ಹಿನ್ನಲೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಚಾಕೊಲೇಟ್ ಎಂದು ಭಾವಿಸಿ ಮಾತ್ರೆಗಳನ್ನು ಸೇವಿಸಿದ್ದ ಮಗು ಅಸ್ವಸ್ಥಗೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಿದ್ದರು. ಆದರೀಗ ಮಗು ಸಾವನ್ನಪ್ಪಿದೆ. ಮೊದಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ತುರುವನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.