ಮನೆ ಸುದ್ದಿ ಜಾಲ ಕ್ಲೋರಿನೇಷನ್ ಲೀಕ್ ಪ್ರಕರಣ: ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ

ಕ್ಲೋರಿನೇಷನ್ ಲೀಕ್ ಪ್ರಕರಣ: ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ

0

ಮೈಸೂರು:  ಸೋಮವಾರ ಮೈಸೂರಿನ  ರೈಲ್ವೆ ಕ್ವಾಟ್ರಸ್ ನಲ್ಲಿ ಕ್ಲೋರಿನೇಷನ್ ಲೀಕ್  ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರಿಗೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ರೈಲ್ವೆ ಕ್ವಾಟ್ರಸ್ ನಲ್ಲಿ ಕ್ಲೋರಿನೇಷನ್ ಲೀಕ್ ಆಗಿ ಉಸಿರಾಟದಲ್ಲಿ ವ್ಯತ್ಯಾಸದಿಂದ ಸುತ್ತಮುತ್ತಲಿನ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿನವರೆಗೆ 30 ಜನ ಕೆ ಆರ್  ಆಸ್ಪತ್ರೆಗೆ, 12 ಜನ ಮಕ್ಕಳು ಚಲುವಾಂಬ ಆಸ್ಪತ್ರೆ ದಾಖಲಾಗಿದ್ದಾರೆ. 28 ಜನ ವಯಸ್ಕರು 12 ಜನ ಮಕ್ಕಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಸಂಜೆಯೊಳಗೆ 25 ಜನ ವಯಸ್ಕರು 11 ಜನ ಮಕ್ಕಳು ಡಿಸ್ಚಾರ್ಜ್ ಆಗಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೆ ಆರ್ ಆಸ್ಪತ್ರೆ ಆರ್ ಎಂಒ ರಾಜೇಶ್, ತಕ್ಷಣ ಆಸ್ಪತ್ರೆ ಬಂದಿದ್ದರಿಂದ ಯಾವುದೇ ಹೆಚ್ಚಿನ ತೊಂದರೆ ಆಗಿಲ್ಲ. ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಎಲ್ಲಾ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇಂದು 25 ಮಂದಿ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಮೂವರಿಗೆ ಐಸಿಯೂ ನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಆಸ್ಪತ್ರೆ ಬಂದ ಸಂದರ್ಭದಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು. ಈಗ ಅವರೂ ಕೂಡ ಚೇತರಿಸಿಕೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.