ಮನೆ ರಾಜಕೀಯ ಕ್ರಿಸ್‌ ಮಸ್ ಸಂಭ್ರಮ: ಶುಭ ಕೋರಿದ ಪ್ರಧಾನಿ ಮೋದಿ

ಕ್ರಿಸ್‌ ಮಸ್ ಸಂಭ್ರಮ: ಶುಭ ಕೋರಿದ ಪ್ರಧಾನಿ ಮೋದಿ

0

ಬೆಂಗಳೂರು: ದೇಶದಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ ಮಸ್ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ತಂಡೋಪತಂಡವಾಗಿ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Join Our Whatsapp Group

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.

ಎಕ್ಸ್‌ನಲ್ಲಿ ತಮ್ಮ ಸಂದೇಶವನ್ನು ಪೋಸ್ಟ್ ಮಾಡಿರುವ ಅವರು, ಭಗವಾನ್ ಜೀಸಸ್ ಅವರು ಹಾಕಿಕೊಟ್ಟ ಮಾರ್ಗಗಳಲ್ಲಿ ನಾವು ಸಾಗಬೇಕಿದೆ. ಆ ಮೂಲಕ ಶಾಂತಿ, ಸಹಬಾಳ್ವೆ, ಸಮೃದ್ಧಿಯನ್ನು ಸಾಧಿಸಬೇಕಿದೆ ಎಂದು ಹೇಳಿದ್ದಾರೆ.

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಮಂಗಳವಾರ ಸಂಜೆ ನವದೆಹಲಿಯಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್ ಸಮಾರಂಭದಲ್ಲಿ ಪ್ರಧಾನಿ ಭಾಗಿಯಾಗಿ ಶುಭಕೋರಿದರು.

ಸಮಾರಂಭದಲ್ಲಿ ಮಾತನಾಡಿದ್ದು ಅವರು ಯೇಸು ಅವರ ಆಶಯದಂತೆ ಸಹೋದರತೆ, ಸಮಾನತೆ, ಪ್ರೀತಿ ಹಾಗೂ ಬಾತೃತ್ವದಿಂದ ನಾವು ಬಾಳಬೇಕು ಎಂದು ಕರೆಕೊಟ್ಟಿದ್ದಾರೆ.