ಮನೆ ಸ್ಥಳೀಯ ನಾಳೆ ಕ್ರಿಸ್‌ಮಸ್‌: ಮೈಸೂರಿನ‌ ಸಂತಫಿಲೋಮಿನಾ ಚರ್ಚ್ ನಲ್ಲಿ ಸಾಗಿದ ಭರದ ಸಿದ್ದತೆ

ನಾಳೆ ಕ್ರಿಸ್‌ಮಸ್‌: ಮೈಸೂರಿನ‌ ಸಂತಫಿಲೋಮಿನಾ ಚರ್ಚ್ ನಲ್ಲಿ ಸಾಗಿದ ಭರದ ಸಿದ್ದತೆ

0

ಮೈಸೂರು: ನಾಳೆ ಕ್ರೈಸ್ತ ಸಮುದಾಯಕ್ಕೆ ಕ್ರಿಸ್‌ ಮಸ್‌ ಹಬ್ಬದ ಸಂಭ್ರಮವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ‌ಸಂತಫಿಲೋಮಿನಾ ಚರ್ಚ್ ನಲ್ಲಿ ಸಿದ್ದತಾ ಕಾರ್ಯ ಭರದಿಂದ ಸಾಗಿದೆ.

Join Our Whatsapp Group

ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಯೇಸುವಿನ ಜನ್ಮದಿನಾಚರಣೆಗೆ ಕ್ಷಣ ಗಣನೆ ಶುರುವಾಗಿದ್ದು, ನಗರದ ಸಂತಫಿಲೋಮಿನಾ ಚರ್ಚ್ ನಲ್ಲಿ ಇಂದು ರಾತ್ರಿಯಿಂದಲೇ‌ ಧಾರ್ಮಿಕ ವಿಧಿಗಳು ಆರಂಭವಾಗಲಿವೆ.

ಅಂದಿನ ಆಳರಸರ ಕಾಲದಲ್ಲಿ ನಿರ್ಮಾಣವಾಗಿರುವ ಸಂತಫಿಲೋಮಿನಾ ಚರ್ಚ್ ಸುಮಾರು 175 ಅಡಿ ಎತ್ತರದ ಆಕರ್ಷಕ ಗೋಪುರಗಳನ್ನು ಹೊಂದಿದೆ. ಕ್ರಿಸ್‌ಮಸ್‌ ಅಂಗವಾಗಿ ಚರ್ಚ್ ನ ಒಳ ಹಾಗೂ ಹೊರ ಆವರಣದಲ್ಲಿ ವಿಶೇಷ ಅಲಂಕಾರ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಸಂತ ಫಿಲೋಮಿನಾ ಚರ್ಚ್ ವಿಶೇಷ ಅಲಂಕಾರದಿಂದ  ಕಂಗೊಳಿಸುತ್ತಿದ್ದು, ರಾತ್ರಿ 12 ಗಂಟೆಯಾಗುತ್ತಿದ್ದಂತೆ ಬಾಲಯೇಸುವಿನ ಮೂರ್ತಿ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕಾಗಿ ಚರ್ಚ್ ನ ಆವರಣದಲ್ಲಿ ತಾತ್ಕಾಲಿಕ ಗೋದಲಿ ನಿರ್ಮಾಣ ಮಾಡಲಾಗಿದೆ. ಚರ್ಚ್ ಹೊರ ಭಾಗದಲ್ಲಿ 4200 ಚದರ ಅಡಿಯಲ್ಲಿ ರಂಗೋಲಿಯಲ್ಲಿ ಯೇಸು ಕ್ರಿಸ್ತನ ಚಿತ್ರ ಅರಳಿದ್ದು, ಕಲಾವಿದ ಪುನೀತ್ ಎಂಬುವವರು ಈ ಚಿತ್ರವನ್ನ ರಚಿಸಿದ್ದಾರೆ.

ಮೈಸೂರು ಪ್ರಾಂತ್ಯದ ಕ್ರೈಸ್ತ ಧರ್ಮಾಧಿಕಾರಿ ಬರ್ನಾಡ್ ಮೊರಾಸ್ ಅವರು  ಕ್ರಿಸ್‌ಮಸ್‌ ಹಬ್ಬದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದು, ಈ ವೇಳೆ ಇತರ ಪಾದ್ರಿಗಳು ಸಾಥ್ ನೀಡಲಿದ್ದಾರೆ. ನಾಳೆ ಇಡೀ ದಿನ ಕ್ರಿಸ್‌ಮಸ್‌ ಪ್ರಾರ್ಥ‌ನೆ ನಡೆಯಲಿದೆ. ಎಂದು ಕ್ರೈಸ್ತ ಪಾದ್ರಿ ಪೀಟರ್ ಬಾಲಸ್ವಾಮಿ ಮಾಹಿತಿ ನೀಡಿದ್ದಾರೆ.