ಸರ್ಕಾರಿ ನೌಕರಿಗೆ ಸೇರಬೇಕೆಂದು ಕಾಯುತ್ತಿರುವವರಿಗೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಉತ್ತಮ ಉದ್ಯೋಗಾವಕಾಶ ದೊರೆಯುತ್ತಿದೆ.
CISF ತಮ್ಮ ಅಧಿಕೃತ ವೆಬ್’ಸೈಟ್’ನಲ್ಲಿ ಸಹಾಯಕ ಸಬ್ ಸಬ್ ಇನ್ಸ್’ಪೆಕ್ಟರ್ (ಸ್ಟೆನೋಗ್ರಾಫರ್)/ ಹೆಡ್ ಕಾನ್ಸ್’ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. CISF ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಭ್ಯರ್ತಿಗಳಿಗೆ ಅರ್ಜಿಸಲ್ಲಿಸಲು ಅನುವುಮಾಡಿಕೊಟ್ಟಿದೆ. 500 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಸರ್ಕಾರಿ ಉದ್ಯೋಗ ಪಡೆಯಲು ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಅಕ್ಟೋಬರ್ 25 ರ ವರೆಗೂ ಅರ್ಜಿಸಲ್ಲಿಕೆ ಪ್ರಕ್ರಿಯೆ ನಡೆಯುತ್ತದೆ. ಈಗಾಗಲೇ ಅರ್ಜಿಸಲ್ಲಿಕೆ ಆರಂಭವಾಗಿದೆ. ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.
ವಯೋಮಿತಿ :
CSIF ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷಗಳು.
CISF ASI ಸ್ಟೆನೋಗ್ರಾಫರ್ ಮತ್ತು HC ಮಿನಿಸ್ಟ್ರಿಯಲ್ 2022 ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
UR/EWS/OBC: 100/-
SC / ST / ESM ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ.
ಸಂಬಳದ ವಿವರಗಳು :
ಸಹಾಯಕ ಸಬ್-ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) – ಪೇ ಲೆವೆಲ್-5 (29,200-92,300 ರೂ.)
ಹೆಡ್ ಕಾನ್ಸ್ಟೆಬಲ್ (ಸಚಿವಾಲಯ) – ಹಂತ-4 ವೇತನ (25,500-81,100 ರೂ.)
ಹೆಚ್ಚಿನ ಮಾಹಿತಿಗೆ CISF ನ ಅಧಿಕೃತ ವೆಬ್’ಸೈಟ್’ಗೆ ಭೇಟಿ ಕೊಡಿ.
ಪ್ರಮುಖ ದಿನಾಂಕಗಳು :
ಅಪ್ಲಿಕೇಶನ್ ಪ್ರಾರಂಭವಾಗುವ ದಿನಾಂಕ : 26 ಸೆಪ್ಟೆಂಬರ್ 2022
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 25 ಅಕ್ಟೋಬರ್ 2022
ಅರ್ಹತೆ :
ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಅಥವಾ ತತ್ಸಮಾನ ಪಾಸಾಗಿರಬೇಕು.
ಎತ್ತರ: ಪುರುಷ – 165 CMS, ಸ್ತ್ರೀ – 155 CMS
ಎದೆ: 77-82 CMS
ಹೆಡ್ ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಅಥವಾ ತತ್ಸಮಾನ ಪಾಸಾಗಿರಬೇಕು.
ಕಂಪ್ಯೂಟರ್ ಟೈಪಿಂಗ್: ಇಂಗ್ಲೀಷ್ ಅಥವಾ ಹಿಂದಿ ಬರಬೇಕು
ಎತ್ತರ: ಪುರುಷ – 165 CMS, ಸ್ತ್ರೀ – 155 CMS
ಎದೆ: 77-82 CMS
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ CISFನ ಅಧಿಕೃತ ವೆಬ್’ಸೈಟ್ cisfrectt.in ಗೆ ಭೇಟಿ ನೀಡಿ.
ರಿಜಿಸ್ಟ್ರೇಷನ್ ಮಾಡಿಕೊಳ್ಳಿ
CISF ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸಿ.
ಅಗತ್ಯ ವಿವರಗಳನ್ನು ಭರ್ತಿ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಮುಂದಿನ ಸಂವಹನಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನಮೂದಿಸಿ.