ಮನೆ ಅಪರಾಧ ವೈಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್ ಗಳ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ

ವೈಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್ ಗಳ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ

0

ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್​ ಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರಿಗೆ ಚಾಕು ಇರಿದಿರುವ ಘಟನೆ ಜೆಪಿ ನಗರ ಬಳಿ ಗುರುವಾರ ರಾತ್ರಿ ನಡೆದಿದೆ.

ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್​ ಸೋನು (19) ಚಾಕು ಇರಿತದಿಂದ ಗಾಯಗೊಂಡವರು.

ಮೂವರು ಶಿವಮೊಗ್ಗ ರೌಡಿಶೀಟರ್ ​ಗಳು. 15 ದಿನದ ಹಿಂದೆ ರೌಡಿಶೀಟರ್ ​ಗಳಾದ ಸಮೀರ್​, ಫರಾಜ್​ ಮತ್ತು ಸಲ್ಲು, ಸೆಬು, ಸೋನು, ಕತ್ರು ಗ್ಯಾಂಗ್​ ನಡುವೆ ಗಲಾಟೆ ನಡೆದಿತ್ತು.

ಯುವಕರು ಗುರುವಾರ ಜೆಪಿನಗರದ ಜಂಡೆಕಟ್ಟೆ ಬಳಿ ಗ್ಯಾರವಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪರಸ್ಪರ ಗುರಾಯಿಸಿಕೊಂಡು, ಮತ್ತೆ ಮಾರಕಾಸ್ತ್ರದಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಐಪಿಸಿ 323, 324, 307, 504, 341 r/w 149 IPC ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.