ಇತ್ತೀಚಿಗೆ ಕಾಲೇಜುಗಳಲ್ಲಿ ರಹಸ್ಯ ಸಭೆಗಳು ನಡೆಯುತ್ತಿವೆ. ಆ ರಹಸ್ಯ ಸಭೆಗಳು ಧರ್ಮ, ಜಾತಿಗಳ ಹೆಸರಿನೊಂದಿಗೆ ಕೋಡ್ ಭಾಷೆಗಳಿರುತ್ತವೆ A ಮೀಟ್, B ಮೀಟ್, C ಮೀಟ್ KRS.T ಮೀಟ್ ಗಳೆಂಬ ಅನೇಕ ಕೋಡ್ ಗಳೊಂದಿಗೆ ಯಾರಾದರೊಬ್ಬರ ಮನೆಯಲ್ಲಿ ಸೇರಿಕೊಂಡು ತಮ್ಮ ಜಾತಿಗೆ ಸಂಬಂಧಿಸಿದ ಮಾತುಕತೆ ಚರ್ಚೆಗಳನ್ನು ಮಾಡುತ್ತಾರೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ಇತರೆ ಧರ್ಮ, ಜಾತಿಗಳವರನ್ನು ವಿಮರ್ಶಿಸುವಂತಹವು ಹೆಚ್ಚಾಗಿ ನಡೆಯುತ್ತಿವೆಯೆಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಗಾಬರಿ ಹುಟ್ಟಿಸುವಂತಹ ವಿಷಯವೇನೆಂದರೆ, ಈ ಬಗೆಯ ಸಭೆಗಳಿಗೆ ಟೀಚರ್ಗಳು, ಲೆಕ್ಚರರ್ ಗಳು ಹಾಜರಾಗುವುದು, ವಿದ್ಯಾರ್ಥಿಗಳಿಗೆ ಧರ್ಮ/ಜಾತಿ ಮತ ತತ್ವಗಳನ್ನು ಬಲವಂತವಾಗಿ ತಲೆಗೆ ತುಂಬುವುದು, ನಿಜಕ್ಕೂ ಒಳ್ಳೆಯದಲ್ಲ.
ನಾನು ಇತ್ತೀಚೆಗೆ ಒಬ್ಬ ಸ್ಫೂಡೆಂಟನ್ನು ಮೋಟಿವೇಟ್ ಮಾಡಲಿಕ್ಕಾಗಿ ಹೋಗಿದ್ದೆ. ನಾನು ಇಳಿದುಕೊಂಡಿದ್ದ ಹೋಟೆಲ್ ರೂಮ್ ಪಕ್ಕದಲ್ಲೇ ಒಂದು ಮೀಟ್ ನಡೆಯಿತು ಸದಸ್ಯರೆಲ್ಲರೂ ಬಂದರು. ಕೋಣೆ ಸಾಕಾಗದೆ ಬಾಗಿಲುಗಳನ್ನು ತೆಗೆದು ಕುಳಿತುಕೊಂಡರು. ಅವರು ಮಾತನಾಡುವ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿವೆ ಅವುಗಳಲ್ಲಿನ ಒಂದು ಆಘಾತಕರ ತುಣುಕೆಂದರೆ ಒಬ್ಬ ಲೆಕ್ಚರ್ರನ್ನು ಇತರ ಲೆಕ್ಚರರ್ ಗಳು ಮತ್ತು ವಿದ್ಯಾರ್ಥಿಗಳು ಸದರಿ ಜಾತಿಯವನಿಗೆ ಇಂಟರ್ನಲ್ಸ್‌ನಲ್ಲಿ ಹೆಚ್ಚು ಅಂಕಗಳನ್ನು ಕೊಟ್ಟಿದ್ದೀಯಾ? ನಮ್ಮವನೊಬ್ಬನು ಕೂಡಾ ಇದ್ದಾನಲ್ಲ ಎಂದು ದಬಾಯಿಸುತ್ತಿದ್ದಾರೆ. ಅದಕ್ಕೆ ಆ ಲೆಕ್ಚರರ್ “ಅವನು ಪರೀಕ್ಷೆಯಲ್ಲಿ ಬಹಳ ಚೆನ್ನಾಗಿ ಬರೆದಿದ್ದಾನೆ ಅದಕ್ಕೆ ತಕ್ಕಹಾಗೆ ಅಂಕಗಳನ್ನು ಕೊಡಬೇಕಿತ್ತು. ಕೊಟ್ಟೆ!” ಎಂದನು. ಆ ಮಾತುಗಳನ್ನು ಕೇಳುತ್ತಿದ್ದರೆ ಇಂದಿನ ವಿದ್ಯಾವಿಧಾನದ ಮೇಲೆ ಅನುಮಾನ ಬಂತು. ಆ ಸಭೆಯಲ್ಲಿ ಮತ್ತೊಂದು ತಮಾಷೆ ಏನೆಂದರೆ, ಅವರುಗಳಲ್ಲಿ ಒಬ್ಬ ನಾಸ್ತಿಕವಾದಿ ಕೂಡಾ ಇದ್ದ ಬಹುಶಃ ಆತನ ವಾದವೇನಿದ್ದರೂ ಜಾತಿ ಮತಗಳಿಗೆ ಸೀಮಿತವಾಗಿರಬಹುದು.
ಡಿಯರ್ ಪೇರೆಂಟ್ಸ್! ಇದು ಹೀಗೆಯೇ ಮುಂದುವರೆದರೆ ನಮ್ಮ ಮಕ್ಕಳಿಗೆ ಅನ್ಯಾಯವಾಗುವುದಂತೂ ಗ್ಯಾರಂಟಿ ಪದವಿಯಲ್ಲಿರುವ ಒಬ್ಬ ವ್ಯಕ್ತಿ ತನ್ನವರಿಗೆ ಅದೆಷ್ಟೇ ಫೇವರ್ಸ್ ಳನ್ನು ಮಾಡಿದರೂ ಅರ್ಹರಾದ ಇತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದರೆ ಅಪಾಯ. ಭವಿಷ್ಯತ್ತಿನಲ್ಲಿ ಅಧಿಕಾರಕ್ಕೆ ಬರುವವರು, ಒಟ್ಟಾರೆ ಮೊದಲ ವ್ಯಕ್ತಿ ಜಾತಿಯಲ್ಲಿನ ಎಲ್ಲರಿಗೂ ಸೊನ್ನೆ ಅಂಕಗಳನ್ನು ಹಾಕುವುದು ಅವರನ್ನು ದ್ರೋಹಿಗಳಾಗಿ ಪರಿಗಣಿಸುವು ದಂತಹವು ನಡೆಯುತ್ತವೆ. ಮೊದಲ ವ್ಯಕ್ತಿ ತನ್ನವರಿಗೆ ಮಾಡಿದ ಸಹಾಯಕ್ಕಿಂತ, ನಂತರ ಉಂಟಾಗುವ ಹಾನಿ ಅಪಾಯಕರ.
*ಅವರ ಹಳ್ಳವನ್ನು ಅವರೇ ತೋಡಿಕೊಳ್ಳುತ್ತಾರೆ.
- ಅಭಿಮಾನಗಳು ಅಧಿಕವಾಗಿರುವ ಶಿಕ್ಷಣಾ ಸಂಸ್ಥೆಗಳು, ತಮ್ಮವರನ್ನು ಪ್ರೋತ್ಸಾಹಿಸುವ ಭರದಲ್ಲಿ ತಮಗರಿವಿಲ್ಲದೇ ತಮ್ಮ ಸಂಸ್ಥೆಗೆ ಅನ್ಯಾಯ ಮಾಡಿಕೊಳ್ಳುತ್ತಾರೆ. ಒಂದು ನಗರದಲ್ಲಿ ಒಂದು ವರ್ಗಕ್ಕೆ ಸೇರಿದ ಒಂದು ಕಾಲೇಜಿನಲ್ಲಿ ತಮ್ಮವರಿಗೇ ಆಗ್ರಸ್ಥಾನ ನೀಡುವುದರೊಂದಿಗೆ, ಇತರ ವಿದ್ಯಾರ್ಥಿಗಳು ಮತ್ತು ಪೇರೆಂಟ್ಸ್ ಗೆ ತಮಗಿಲ್ಲಿ ಅನ್ಯಾಯ ನಡೆಯುತ್ತಿದೆಯೆಂದು ಸ್ಪಷ್ಟವಾಗಿ ಮನವರಿಕೆಯಾಯಿತು. ಬೇರೆ ವರ್ಗಕ್ಕೆ ಸೇರಿದ ಮತ್ತೊಬ್ಬ ಶ್ರೀಮಂತ ವ್ಯಕ್ತಿ, ತಮ್ಮ ಪ್ರತಿಷ್ಠೆ, ಸ್ವಯಂ ಸಾಮರ್ಥ್ಯಗಳನ್ನು ಉಪಯೋಗಿಸಿ, ಒಂದೇ ವರ್ಷದೊಳಗೆ ಮತ್ತೊಂದು ಕಾಲೇಜನ್ನು ಸ್ಥಾಪಿಸಿದರು. ಅಲ್ಲಿ ಕಾಲೇಜು ಪ್ರಾರಂಭವಾದಾಕ್ಷಣ ಮೇಲಿನ ಸದರಿ ಕಾಲೇಜಿನಲ್ಲಿದ್ದವರೆಲ್ಲಾ ಅದಕ್ಕೆ ವಿರಾಮ ಹೇಳಿ ಇಲ್ಲಿ ಬಂದು ಸೇರಿಕೊಂಡರು. ಈ ಮೊದಲ ಕಾಲೇಜು ಒಂದು ವರ್ಗಕ್ಕೆ ಸೇರಿದ ವಿದ್ಯಾರ್ಥಿ ಗಳಿಂದ ತುಂಬಿಹೋಗಿತ್ತು ಸೃಜನಾತ್ಮಕತೆಯೆಂಬುದು ಮರೀಚಿಕೆಯಾಯಿತು. ಅದನ್ನು ಗುರುತಿಸಿ ಮೊದಲ ಕಾಲೇಜಿನವರು ತಮ್ಮ ಪದತಿಯನ್ನು ತಕ್ಷಣ ಬದಲಾಯಿಸಿಕೊಂಡರು. ತಮ್ಮ ಜಾತಿ ವರ್ಗಕ್ಕೆ ಸೇರಿದವರನ್ನು ಕೈಬಿಟ್ಟು ಬೇರೆ ವರ್ಗಕ್ಕೆ ಸೇರಿದ ಲೆಕ್ಚರರ್ ಗಳಿಗೆ ಪ್ರಥಮ ಆದ್ಯತೆಯನ್ನು ನೀಡಿ ನೇಮಕ ಮಾಡಿಕೊಂಡರು ತಮ್ಮ ವಿದ್ಯಾರ್ಥಿಗಳನ್ನೆಲ್ಲಾ ಸಮಾವೇಶಗೊಳಿಸಿ ”ನಾವು ಕೈಗೊಂಡಿದ್ದ ಕ್ರಮಗಳಿಂದಾಗಿ ಒಳ್ಳೆಯ ವಿದ್ಯಾರ್ಥಿಗಳೆಲ್ಲಾ ಬೇರೆ ಶಿಕ್ಷಣ ಸಂಸ್ಥೆಗೆ ವಲಸೆ. ಹೋಗಿಬಿಟ್ಟರು. ಈಗಲಾದರೂ ನೀವು ಬದಲಾಗಿ” ಎಂದು ಹೇಳಿದರು ಪ್ರಸ್ತುತ ಆ ಕಾಲೇಜ್ನ ಆಡಳಿತ ಮಂಡಳಿಯ ಮಾಲಿಕತ್ವದ ಶೈಲಿ ಬದಲಾದರೂ, ಸ್ಪೂಡೆಂಟ್ಸ್ ದೃಷ್ಟಿಯಲ್ಲಿ ಅದು ಸದರಿ ಜಾತಿ/ವರ್ಗಕ್ಕೆ ಸೇರಿದ ಕಾಲೇಜ್ ಎಂಬ ಅಂಕಿತ ಶಾಶ್ವತವಾಯಿತು ಸಮಾಜದಲ್ಲಿ ಅತಿ ಕಡಿಮೆ ಶೇಕಡತೆ ಆ ವರ್ಗದವರೇ ಅದರಲ್ಲಿ ಸೇರುತ್ತಿದ್ದಾರೆ. ಬುದಿವಂತ ಪ್ರತಿಭೆಯುಳ್ಳ ಲೆಕ್ಚರರ್ ಗಳು ಕೂಡಾ ಆ ಕಾಲೇಜನ್ನು ತೊರೆದು ಹೋಗುತ್ತಿದ್ದಾರೆ. ಈ ರೀತಿ ಬಿಟ್ಟುಹೋಗುತ್ತಿರುವವರಲ್ಲಿ ಆ ಜಾತಿಯವರು ಕೂಡಾ ಇರುವುದು ವಿಶೇಷ. ಆದ್ದರಿಂದ ಟೀಚರ್ ಗಳು, ಲೆಕ್ಚರರ್ ಗಳು ಮತ್ತು ಮಾಲೀಕ/ಆಡಳಿತ ಮಂಡಳಿಯವರು ಕೂಡಾ ತಮ್ಮ ಮೇಲೆ ಜಾತಿ, ಧರ್ಮಗಳ ಮುದ್ರೆ ಬೀಳದ ಹಾಗೆ ಎಚ್ಚರವಹಿಸುವುದೊಳ್ಳೆಯದು! ಅವರ ದಾರಿ ಅವರದು ಮಕ್ಕಳನ್ನು ಬೆಳೆಸುವ ಬುದಿ, ಜಾಣೆಗಳು ಹುಟ್ಟಿನಿಂದಲೆ ಯಾರಿಗೂ ಇರುವುದಿಲ್ಲ. ಮಕ್ಕಳು ಹುಟ್ಟಿದ ನಂತರ ಆ ವಿಷಯವನ್ನು ಕಲಿತುಕೊಳ್ಳುತ್ತಾರೆ. ಅವಿಭಕ್ತ ಕುಟುಂಬಗಳಲ್ಲಿ ಹಿರಿಯರ ಮೇಲುಸ್ತುವಾರಿಯಲ್ಲಿ ಕಲಿತುಕೊಳ್ಳುತ್ತಾರೆ. ಬೇರೆಯಾಗಿ ಸಂಸಾರ ಹೂಡಿರುವವರು ತಮಗೆ ತಿಳಿದಿರುವ ಪದತಿಯಲ್ಲಿ ವ್ಯವಹರಿಸುತ್ತಾರೆ. ಮತ್ತೆ ಕೆಲವು ಮಂದಿ ಕಾಲದೊಂದಿಗೇ ಬರುತ್ತಿರುವ ಬದಲಾವಣೆಗಳನ್ನು ಗ್ರಹಿಸಿ ಜಾಗ್ರತೆಗೊಂಡು “ಆರ್ಟ್ ಆಫ್ ಪೇರೆಂಟಿಂಗ್”ಗೆ ಸಂಬಂಧಿಸದ ಹಾಗೆ ಪುಸ್ತಕಗಳನ್ನು ಓದಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ನೀವು ಎಂತಹ ಪೇರೆಂಟ್ಸ್ ಎಂಬುದನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದೀರಾ? ಹಾಗಾದರೆ ಈ ಕೆಳಗೆ ನೀಡಲಾಗಿರುವುದನ್ನು ಓದಿ ಖಾಲಿ ಸ್ಥಳದಲ್ಲಿ ಟಿಕ್ ( ) ಮಾಡಿರಿ.
ಹೌದು / ಅಲ್ಲ / ಆಗಾಗ್ಗೆ
- ಹೊರಗಿನ ಸಮಸ್ಯೆಗಳಿಂದ ಹೆಚ್ಚು ಒತ್ತಡ ಉಂಟಾಗಿದ್ದರೆ ನನಗೆ ಅರಿವಿಲ್ಲದ ಹಾಗೇ ಮನೆಯಲ್ಲಿ ಬೇಸರದಿಂದಿರುತ್ತೇನೆ.
- ನಾನು ಹೆಚ್ಚು ಬಿಡುವಿಲ್ಲದೆ ಇರುವುದರಿಂದ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ.
- ಮಕ್ಕಳು ಅಳುತ್ತಿದ್ದರೆ ನನಗೆ ಬಹಳ ಕೋಪ ಬರುತ್ತದೆ. ಆ ಕೋಪದಲ್ಲೇ ಎರಡೇಟು ಹೊಡೆದುಒತುತ್ತೇನೆ.
4 ನಮ್ಮ ಮಕ್ಕಳನ್ನು ನಾನು ಹೆಚ್ಚಾಗಿ ಹೊಗಳುವುದಿಲ್ಲ ಹಾಗೇನಾದರೂ ಹೊಗಳಿದರೆ ಅವರನ್ನು ಅಟ್ಟಕ್ಕೇರಿದಂತಾಗುತ್ತದೆ.
ನಾನು ನಮ್ಮ ಹೆತ್ತವರ ಬಳಿ ಹೇಗಿದ್ದೇನೋ. ನಮ್ಮ ಮಕ್ಕಳು ಕೂಡಾ ಹಾಗೆಯೇ ಇರಬೇಕೆಂದು ಆಶಿಸುತ್ತೇನೆ
- ನನಗೆ ಕೋಪ ಬಂದರೆ ನನಗರಿವಿಲ್ಲದ ಹಾಗೆ ಕೆಟ್ಟ ಮಾತುಗಳಲ್ಲಿ ಬೈದುಬಿಡುತ್ತೇನೆ.
- ನನ್ನ ಮಕ್ಕಳು ನನ್ನ ಇಷ್ಟಕ್ಕೆ ವಿರುದವಾಗಿ ಏನೇ ಮಾಡಿದರೂ ನಾನು ಸುಮ್ಮನಿರುವುದಿಲ್ಲ.
- ಮಕ್ಕಳು ಕೆಲವೊಮ್ಮೆ ತಪ್ಪು ಮಾಡಿದರೆ ಅವರೊಂದಿಗೆ ಮಾತನಾಡುವುದನ್ನು ಬಿಟ್ಟುಬಿಡುತ್ತೇನೆ.
- ಕೆಲವೊಮ್ಮೆ ನಾನು ಮಕ್ಕಳೊಂದಿಗೆ ವರ್ತಿಸುವ ವೈಖರಿಗೆ ನನಗೇ ಕೋಪ ಬರುತ್ತದೆ. ಆದರೆ ಆ ಸಮಯದಲ್ಲಿ ಅದು ನೆನಪಿಗೆ ಬರುವುದಿಲ್ಲ.
- ನನ್ನ ಮಕ್ಕಳು ತಪ್ಪು ಮಾಡಿದರೆಂದು ಯಾರಾದರೂ ಹೇಳಿದಾಗ, ಅದಕ್ಕೆ ಸಮಜಾಯಿಷಿ ಕೇಳದೆ ಶಿಕ್ಷಿಸುತ್ತಿರುತ್ತೇನೆ
11 ಮಕ್ಕಳು ಏನನ್ನಾದರೂ ಕೇಳಿದಾಗ ‘ಸರಿ’ ಎಂದು ಹೇಳುವುದಕ್ಕೂ ಕೂಡಾ ”ಬೇಡಾ” ಅನ್ನುತ್ತೇನೆ
- ನಮ್ಮ ಮಕ್ಕಳೊಂದಿಗೆ ಮಾತನಾಡಬೇಕೆಂದರೆ ನನಗೆ ತುಂಬಾ ಕಿರಿಕಿರಿಯಾಗುತ್ತದೆ
- ಮಕ್ಕಳು ಯಾರಾದರೂ ನನಗೆ ಸಲಹೆ ನೀಡಬೇಕೆಂದು ನೋಡಿದರೆ ಒದೆಯಬೇಕೆನಿಸುತ್ತದೆ.
- ಮಕ್ಕಳಿಗೆ ಬೇಕಾದ್ದನ್ನು ನಾನು ಕೊಡಲಾಗುತ್ತಿಲ್ಲವೆಂದು ಗಿಲ್ಟಿ ಫೀಲಿಂಗ್ ಆಗುತ್ತದೆ.
- ನನ್ನ ಶಿಸ್ತಿನ ನಡವಳಿಕೆ ತುಂಬಾ ಕಠಿಣವಾಗಿರುತ್ತದೆಯೆಂದು ಗೊತ್ತಿದ್ದರೂ ಬದಲಾಗುವುದಕ್ಕೆ ಆಗುತ್ತಿಲ್ಲ.
- ನಮ್ಮ ಮಕ್ಕಳು ನನಗಿಂತ, ನನ್ನ ಸಂಗಾತಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದನ್ನು ನನ್ನಿಂದ ಸಹಿಸಲಾಗುತ್ತಿಲ್ಲ
- ಎಷ್ಟೋ ಕಷ್ಟಪಟ್ಟು ನಾನು ಹಗಲಿರುಳು ದುಡಿಯುತ್ತಿದ್ದರೂ ಅವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
- ನನ್ನ ಮಾತಿಗೆ ಎದುರಾಗಿ ಮಾತನಾಡಿದರೆ, ಅವರನ್ನು ಒದ್ದಾದರೂ ಸರಿ ನನ್ನ ಮಾತು ಕೇಳುವ ಹಾಗೆ ಮಾಡುತ್ತೇನೆ
. - ಮಕ್ಕಳಿಗೆ ಬೇಕಾದವುಗಳನ್ನು ಖರೀದಿಸಿ ಕೊಡಬೇಕಾಗಿ ಬಂದರೆ, ನನಗಿಷ್ಟವಾದುದ್ದನ್ನೇ ಕೊಡಿಸುತ್ತೇನೆ.
- ನನ್ನ ಮಕ್ಕಳನ್ನು ಹೊಡೆದರೂ, ಬೈದರೂ, ಸಾಯಿಸಿದರೂ ನನ್ನಿಷ್ಟ, ನನ್ನನ್ನು ಕೇಳುವವರು ಯಾರು ? ಇದೇ ಪ್ರಶ್ನೆಪತ್ರಿಕೆಯನ್ನು ಇಪ್ಪತ್ತೈದು ವರ್ಷಗಳ ಹಿಂದಿನ ತಾಯಿ-ತಂದೆಯರಿಗೆ ಕೊಟ್ಟಿದ್ದರೆ ಕನಿಷ್ಟ 15 ‘ಹೌದು’ ಗಳೆಂಬ ಉತ್ತರಬರುತ್ತಿದ್ದವು ಉಳಿದವು ಆಗಾಗ್ಗೆ ಎಂದು ಬರುತ್ತಿದ್ದವು ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನೀವು ಅದೆಷ್ಟೇ ಮಹನೀಯರು/ದೊಡ್ಡ ವ್ಯಕ್ತಿಗಳಾಗಿದ್ದರೂ ಸರಿ. ಮಕ್ಕಳು ಹುಟ್ಟಿದ ನಂತರ ನಿಮಗೊಂದು ಜವಾಬ್ದಾರಿ ಇದೆಯೆಂಬುದನ್ನು ಗುರುತಿಸಬೇಕು ನಿಮಗೆ “ಅಲ್ಲ’ ವೆಂಬ ಉತ್ತರಗಳು 15 ಬರಬೇಕು ‘ಆಗಾಗ್ಗೆ’ ಎಂಬುದು ‘5’ ಬಂದರೂ ಪರವಾಗಿಲ್ಲ.














