ಮನೆ ಸ್ಥಳೀಯ ಸ್ವಚ್ಛ ಪರಿಸರ ಗ್ರಾಹಕನ ಹಕ್ಕು: ಪ್ಲಾಸ್ಟಿಕ್ ನಿಷೇಧದ ಅಭಿಯಾನಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು: ಡಾ. ಜಗನ್ನಾಥ್

ಸ್ವಚ್ಛ ಪರಿಸರ ಗ್ರಾಹಕನ ಹಕ್ಕು: ಪ್ಲಾಸ್ಟಿಕ್ ನಿಷೇಧದ ಅಭಿಯಾನಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು: ಡಾ. ಜಗನ್ನಾಥ್

0

ಮೈಸೂರು: ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯನ್ನು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಇಲ್ಲಿ ಅತ್ಯಂತ ಅರ್ಥಗರ್ಭಿತವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಗನ್ನಾಥ್, ಇಸ್ರೋ ನಿವೃತ್ತ ವಿಜ್ಞಾನಿ, ಪ್ರಸ್ತುತ ವಾತಾವರಣದ ಕ್ರಮಬದ್ದ ನಿರ್ವಹಣೆಗಾಗಿ ಇಂದಿನ ಯುವ-ಪೀಳಿಗೆ ಮತ್ತು ವಿದ್ಯಾರ್ಥಿಗಳು ಮುಂದಾಗಬೇಕು. ಅದರಲ್ಲೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬೇಕು. ಇದನ್ನು ಗಂಭೀರವಾಗಿ ಅಳವಡಿಸಿಕೊಂಡರೆ ಇಂದಿನ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯಲ್ಲಿ ಸ್ವಚ್ಛ ಪರಿಸರದ ನಿರ್ದಿಷ್ಟತೆ ಸಾಕಾರವಾಗುತ್ತದೆ ಇದಕ್ಕೆ.. ಎಲ್ಲರೂ ಸಹಕರಿಸಬೇಕು ಎಂದು ಕರೆ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ಜಿ. ಪಾಂಡುರಂಗ ಮೂರ್ತಿ ತಮ್ಮ ವಿಶೇಷ ವಾದ ದೃಶ್ಯ-ಪ್ರಾತ್ಯಕ್ಷಿಕೆ ಆಧಾರಿತ ಉಪನ್ಯಾಸದಲ್ಲಿ.. ವಿದ್ಯಾರ್ಥಿಗಳನ್ನು ಕುರಿತು, ಗ್ರಾಹಕ ಹಕ್ಕುಗಳು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಹಾಗು ವಿಶ್ವ ಮಾನ್ಯತೆಗೆ ಪ್ರೇರಕ ಎಂದು ಗ್ರಾಹಕರ ನಿರ್ದಿಷ್ಟ ಹಕ್ಕುಗಳ ಘೋಷಣೆ ಮೊಳಗಿಸಿದರು.

ಮುಂದುವರೆದು, ಈ ದಿನದ ಸಂಭ್ರಮಾಚರಣೆಯಲ್ಲಿ, ಪ್ರಸ್ತುತ ಸಂದರ್ಭದಲ್ಲಿನ ಪ್ರಾಕೃತಿಕ ಅಕಾಲಿಕ ಸನ್ನಿವೇಶವನ್ನು ಉಲ್ಲೇಖಸಿ ಮನೆಯ ಚಾವಣಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಮಳೆ ನೀರು ಕೊಯ್ಲು  (Roof-Top Rain Water Harvesting) ತಂತ್ರಜ್ಞಾನ ವನ್ನು ಪ್ರತಿಯೊಬ್ಬರೂ ಅವರವರ ಮನೆಗಳಿಗೆ ಅಳವಡಿಸಿಕೊಳ್ಳಬೇಕು. ಇದರಿಂದ, ಕುಡಿಯುವ ಮತ್ತು ಬಳಸುವ ನೀರಿನ ನಿತ್ಯ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಅಲ್ಲದೇ, ನೀರಿನಲ್ಲಿ ಫ್ಲೋರೈಡ್ ಮತ್ತು ಅರ್ಸೆನಿಕ್ ನಂತಹ ಗಂಭೀರ ಸಮಸ್ಯೆಗಳು ಇರುವ ಪ್ರಾಂತ್ಯಗಳಲ್ಲಿ ಮಳೆ ನೀರಿನ ಸೇವನೆ ಮಾನವನ ಆರೋಗ್ಯದ ಮೇಲೆ ಅತ್ಯಂತ ದನಾತ್ಮಕವಾದ ಪರಿಣಾಮ ಬೀರುತ್ತದೆ. ಜೊತೆಗೆ, ಮಳೆನೀರಿನ ಸಂಗ್ರಹ ಮತ್ತು ಸೇವನೆಯಿಂದ ಮನುಷ್ಯ ದೇಹದಲ್ಲಿನ ವಿಷ ಪದಾರ್ಥಗಳು ದೇಹದಿಂದ ಹೊರಹಾಕಲ್ಪಡುತ್ತವೆ. ಇದಷ್ಟೇ ಅಲ್ಲದೇ, ಮಳೆ ನೀರಿನಿಂದ ಮನೆಯ ಕೈತೋಟದ ನಿರ್ವಹಣೆ, ಶುದ್ದೀಕರಣ ಹಾಗು ಇತರೆ ದೈನಂದಿನ ಚಟುವಟಿಕೆಗಳಿಗೂ ಉಪಯೋಗವಾಗುತ್ತದೆ ಎಂದು ತಂತ್ರಜ್ಞಾನದ ಪ್ರಾಯೋಗಿಕ ದೃಶ್ಯಗಳ ಮೂಲಕ ತಿಳಿಸಿಕೊಟ್ಟರು.

ಡಾ. ಜಿ ಪಿ ಮೂರ್ತಿಯವರು, ವಿಶ್ವ ಗ್ರಾಹಕ ಹಕ್ಕುಗಳ ದಿನದಂದು, ಗ್ರಾಹಕ ಹಕ್ಕುಗಳು ತಾಯಿಯ ಗರ್ಭದಿಂದ ಪ್ರಾರಂಭವಾಗಿ-ಸಾವಿನ ನಂತರದ ಘೋರಿಯವೆರೆಗೂ ಅಸ್ತಿತ್ವದಲ್ಲಿರುತ್ತವೆ ಮತ್ತು ಗ್ರಾಹಕ ಹಕ್ಕುಗಳು ದೇಶದ ಅಭಿವೃದ್ಧಿ ಮತ್ತು ವಿಶ್ವ ಮಟ್ಟದ ಪ್ರಾತಿನಿದ್ಯವನ್ನು ಪ್ರತಿಪಾದಿಸುತ್ತವೆ, ಹಾಗಾಗಿ ನಿಮ್ಮ ಹಕ್ಕು ಎಂದೆದಿಗೂ ಆಭಾದಿತ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಅವರ ಮನೆಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಅಗತ್ಯವಾಗಿ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ-ವಿಧಿ ಬೊಧಿಸುವ ಮೂಲಕ ಅಭಿಯಾನದ ಕರೆಕೊಟ್ಟರು. 

ಕಾಲೇಜಿನ ಪ್ರಾಂಶುಪಾಲರಾದ ಡಾ. ಮರೀಗೌಡರು ವಿದ್ಯಾರ್ಥಿಗಳಿಗೆ ವಿಶ್ವ ಗ್ರಾಹಕರ ಹಕ್ಕುಗಳ ಮಂಡನೆ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶೈಲ ರಾಮ್ಮಣ್ಣನವರು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಸದರಿ ಅತಿಥಿಗಳು ನೀಡಿದ ಉಪನ್ಯಾಸ ಹಾಗು ಭಾಷಣದ ಅಂಶಗಳು ವಿದ್ಯಾರ್ಥಿಗಳಿಗೆ ಅವರ ಸಾಮಾಜಿಕ ಪ್ರಗತಿಗೆ ಹಾಗು ಮುಂದಿನ ಉಜ್ವಲ ಭವಿಷ್ಯಕ್ಕೆ ಪ್ರೇರಣಾ ಶಕ್ತಿಯಾಗಿದೆ ಎಂದು ಬಣ್ಣಿಸಿದ್ದರು.

ಕಾರ್ಯಕ್ರಮದಲ್ಲಿ, MGP ಯ ಕಾರ್ಯ ಪಡೆ ಸದಸ್ಯರಾದ ಅರುಣ್ ಕುಮಾರ್ ಶೆಟ್ಟರ್, ಭಾನು ಪ್ರಶಾಂತ್, ವಿಶ್ವನಾಥ್, ಸೋಮಶೇಖರ್, ಶಂಕರ್ ರಾಘವೇಂದ್ರ, ದಯಾನಂದ ಸಾಗರ್, ಶಿವಕುಮಾರ್ ಸ್ವಾಮಿ, ರಮೇಶ್, ಸೀತಾರಾಮ್ ಉಪಸ್ಥಿತರಿದ್ದು ಹಾಗು ಇತರ ಸದಸ್ಯರುಗಳು ಭಾಗವಹಿಸಿದ್ದರು

ಪದವಿ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಂತಿಮವಾಗಿ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರು ವಂದನಾರ್ಪಣೆ ಮಾಡಿದರು.

ಇದೇ ವೇಳೆ, ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯ ಅಂಗವಾಗಿ MGP ಯ ವತಿಯಿಂದ ಮುಂದುವರೆದ  ಸರಣಿ ಉಪನ್ಯಾಸ ಮಾಲಿಕೆ ಇತರ ಆಯ್ದು ವೇದಿಕೆಗಳಲ್ಲಿ ಮುಂದುವರೆಯಲಿದೆ ಎಂದು MGP ಕಾರ್ಯ ನಿರ್ವಾಹಕ ಮಂಡಳಿ ತಿಳಿಸಿದೆ.