ಮನೆ ರಾಜ್ಯ ಅಮರನಾಥದಲ್ಲಿ ಮೇಘಸ್ಪೋಟ: ಕನ್ನಡಿಗರು ಸುರಕ್ಷಿತ- ಸಿಎಂ ಬೊಮ್ಮಾಯಿ

ಅಮರನಾಥದಲ್ಲಿ ಮೇಘಸ್ಪೋಟ: ಕನ್ನಡಿಗರು ಸುರಕ್ಷಿತ- ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯದ ನೂರಕ್ಕೂ ಹೆಚ್ಚು ಜನ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜತೆ ಸಂಪರ್ಕದಲ್ಲಿ ಇದ್ದೇವೆ ಎಂದು ಹೇಳಿದರು.
ಮೇಘಸ್ಫೋಟದಲ್ಲಿ ೧೫ ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬೇರೆ ಯಾವುದೇ ಅಹಿತಕರ ಘಟನೆಗಳ ಸುದ್ದಿ ಇಲ್ಲ. ನಾವು ತುರ್ತು ಹೆಲ್ಪ್‌ಲೈನ್ ತೆರೆದಿದ್ದೇವೆ. ಹೆಲ್ಪ್‌ಲೈನ್?ಗೆ ೧೫-೨೦ ಜನ ಈಗಾಗಲೇ ಕರೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮಾಡ್ತಿದ್ದೇವೆ. ಬಿಎಸ್‌ಎಫ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ನಮ್ಮ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಏನೇ ಮಾಹಿತಿ, ಸುದ್ದಿ ಇದ್ದರೂ ನಮ್ಮ ಹೆಲ್ಪ್‌ಲೈನ್ ಗೆ ಕರೆ ಮಾಡಲಿ. ಕೂಡಲೇ ರಕ್ಷಣಾ ಕಾರ್ಯ ಮಾಡ್ತೇವೆ ಎಂದು ತಿಳಿಸಿದರು.
ರಾಜ್ಯದ ಹಲವೆಡೆ ಮಳೆ ಅನಾಹುತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಳೆ ಹಾನಿ ಬಗ್ಗೆ ನಿನ್ನೆ ಸಭೆ ನಡೆಸಿದ್ದೇನೆ. ಕೆಲವು ಕಡೆ ಸ್ವಲ್ಪ ಮಳೆ ಕಡಿಮೆ ಆಗಿದೆ. ಕೆಲವೆಡೆ ಇನ್ನೂ ೨-೩ ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಇದಕ್ಕಗುಣವಾಗಿ ಕಾರ್ಯಾಚರಣೆ ಮಾಡುತ್ತೇವೆ ಎಂದರು.