ಲವಂಗವು ಉಷ್ಣ ಸ್ವರೂಪದ್ದಾಗಿದೆ. ಸುವಾಸನೆ ಉತ್ಪಾದಿಸುತ್ತದೆ. 15ಮೀ. ಎತ್ತರ ತಲುಪಬಲ್ಲ ಮರ. ಗಟ್ಟಿಕಾಂಡ, ಇದಿರು ಬದಿರೆಲೆ, ನೀಲಿ ಹೂ, ಆಹ್ಲಾದಕರ ಸುಗಂಧವಿರುವ ಹೂ, ಒಣಗಿಸಿದ ಹೂವನ್ನು ಸಾಂಬಾರವಾಗಿ ಬಳಸುವರು. ಯುಜಿನಾಲ್, ಕಾರ್ಯೊಫಿಲ್ಲಿನ್ ಗಳೆಂಬ ರಾಸಾಯನಿಕ ಹೂ ಮೊಗ್ಗಿನಲ್ಲಿದೆ. ಅತ್ಯುತ್ತಮ ಪಾಚಕ ಸಾಂಬಾರವಾಗಿ ಅಡುಗೆ ಮನೆ ಬಳಕೆಯಲ್ಲಿದೆ. ಮುಖ್ಯವಾಗಿ ಹಲ್ಲು ನೋವಿನ ಮದ್ದು ಎಂದು ಲವಂಗವನ್ನು ಭಾವಿಸುವರು ಮತ್ತು ಬಳಸುವರು.
ಔಷಧಿಯ ಗುಣಗಳು :-
* ಲವಂಗದ ಕಷಾಯವನ್ನು ಮಾಡಿ, ಸೇವಿಸಿದರೆ ಹೊಟ್ಟೆಯೊಳಗಿನ ಜಂತು, ಹೊಟ್ಟೆ ಉಬ್ಬರ, ಸಜೀರ್ಣದ ಸಮಸ್ಯೆ ಪರಿಹಾರವಾಗುತ್ತದೆ.
* ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ ಪರಿಹಾರಕ್ಕೆ ಲವಂಗವನ್ನು ಚೀಪಬೇಕು. ಪುಡಿಯನ್ನು ಜೇನಿನ ಸಂಗಳ ನೆಕ್ಕಬಹುದು.
* ಕಫ, ಕೆಮ್ಮು, ಗಂಟಲು ನೋವಿನಲ್ಲಿ ಲವಂಗವನ್ನು ಚೀಪಿದರೆ ಹಿತಕರ.
* ತಲೆನೋವು, ತಲೆಭಾರ, ನೆಗಡಿಯಲ್ಲಿ ಕೂಡ ಲವಂಗ ಅರೆದು ಬಿಸಿಯಾಗಿ ಹಣೆಗೆ ಪಟ್ಟು ಹಾಕಬಹುದು. ತಲೆನೋವು ಪರಿಹರಿಸುತ್ತದೆ.
* ಲವಂಗ ಬಟ್ಟಿಳಿಸಿದಾಗ ಶೇಕಡ 15ರಷ್ಟು ತೈಲಾಂಶ ಲಭ್ಯವಾಗುತ್ತದೆ. ಹಲ್ಲು ನೋವಿಗೆ ಒಸೆಇನ ದಿರ್ಬಲತೆಗೆ, ಹಳೆ ಕೆಮ್ಮು, ನೆಗಡಿ ಪರಿಹಾರಕ್ಕೆ ಲವಂಗ ತೈಲವನ್ನು ಬಳಸಬಹುದು. ಅಲ್ಪಪ್ರಮಾಣದ ಸೇವನೆಯಿಂದ ಲಾಭವಾಗುತ್ತದೆ. ಎಣ್ಣೆ ತೆಗೆದ ನಕಲಿ ಲವಂಗ ಕಲಬೆರಕೆಯಿರುತ್ತದೆ. ಆದ ಕಾರಣ ನೀರಿನಲ್ಲಿ ಮುಳುಗುವ ಭಾರವಾದ ಲವಂಗದ ಬಳಕೆಯಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.