ಮನೆ ರಾಜ್ಯ 75 ಎಲೆಕ್ಟ್ರಿಕ್ ಬಸ್‌ ಗಳ ಲೋಕಾರ್ಪಣೆಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

75 ಎಲೆಕ್ಟ್ರಿಕ್ ಬಸ್‌ ಗಳ ಲೋಕಾರ್ಪಣೆಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

0

ಬೆಂಗಳೂರು (Bengaluru): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇಂದು 75 ಎಲೆಕ್ಟ್ರಿಕ್ ಬಸ್ಸುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು.

ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಅವರು, ಬಿಎಂಟಿಸಿಗೆ 25 ವರ್ಷ ತುಂಬಿದೆ. ಬಸ್‌ಗಳ ಮೆಂಟೇನೆನ್ಸ್‌ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲಿಗೆ ಲಾಭದಾಯಕವಾಗಿದ್ದ ಬಿಎಂಟಿಸಿ ಕೋವಿಡ್‌ನಿಂದ ನಷ್ಟಕ್ಕೀಡಾಗಿದೆ. ಅದನ್ನು ಮತ್ತೆ ಮೇಲೆತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ಬಿಎಂಟಿಸಿಯ ೫ ಸಾವಿರ ಗಾಡಿಗಳು ಬೆಂಗಳೂರಿನಲ್ಲಿ ಓಡಾಡುತ್ತದೆ. ೧.೨೫ ಲಕ್ಷ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಇನ್ನೂ ಮೂರು ವರ್ಷದಲ್ಲಿ ಜನಸಂಖ್ಯೆಗಿಂತ ಮೂರರಷ್ಟು ಗಾಡಿಗಳಿರುತ್ತದೆ. ಬೆಂಗಳೂರು ಜನಸಂಖ್ಯೆ ಬೆಳೆಯುತ್ತಿದೆ. ಬೆಂಗಳೂರಿಗರ ಸಾರಿಗೆ ವ್ಯವಸ್ಥೆಯ ಯೋಜನೆ ರೂಪಿಸಬೇಕಿದೆ. ಬೆಂಗಳೂರಿನ ಬೆಳವಣಿಗೆ ಎಲ್ಲಾ ದಿಕ್ಕುಗಳಲ್ಲೂ ಆಗುವಂತೆ ಸರ್ಕಾರ ಮಾಡಬೇಕಾಗುತ್ತದೆ. ಇಷ್ಟರಲ್ಲೇ ಬೆಂಗಳೂರಿನ ಮೊಬಿಲಿಟಿ ಪ್ಲಾನ್ ಬರುತ್ತದೆ ಎಂದು ತಿಳಿಸಿದರು.

ಸರ್ಕಾರ ಸಂಪೂರ್ಣವಾಗಿ ಬಿಎಂಟಿಸಿ ಜೊತೆ ಇದೆ. ಬಿಎಂಟಿಸಿ ಅಭಿವೃದ್ಧಿ ಸಾಕಷ್ಟು ಅವಶ್ಯಕತೆ ಇದೆ. ಕಳೆದ ಮೂರು ವರ್ಷದಲ್ಲಿ 3 ಸಾವಿರ ಕೋಟಿಯನ್ನು ನಮ್ಮ ಸರ್ಕಾರ ಸಾರಿಗೆಗೆ ನೀಡಿದೆ. ಸರ್ಕಾರ ಹೀಗೆ ಎಲ್ಲವನ್ನೂ ನಡೆಸೋದಕ್ಕೆ ಆಗಲ್ಲ. ಹಂತಹಂತವಾಗಿ ಶ್ರೀನಿವಾಸ್‌ಮೂರ್ತಿಯವರ ವರದಿಯನ್ನು ಜಾರಿ ಮಾಡ್ತೀವಿ. ಸಾರಿಗೆ ಇಲಾಖೆ ಮತ್ತು ಇಂಧನ ಇಲಾಖೆಯನ್ನು ಪುನರ್‌ರಚನೆ ಮಾಡುವ ಅವಶ್ಯಕತೆ ಇದೆ. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತಿದೆ. ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕೊಡುವುದು ನನ್ನ ಸರ್ಕಾರದ ಧ್ಯೇಯ ಎಂದರು.

ನನ್ನ ಸರ್ಕಾರದಲ್ಲಿ 5 ಸಾವಿರ ಕೋಟಿ ಆದಾಯ ಕಡಿಮೆ ಇತ್ತು. ಬಜೆಟ್ ಗಾತ್ರವನ್ನು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಯಾವ ಯಾವ ಕ್ಷೇತ್ರವನ್ನು ಮುಟ್ಟಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಿಂದ ನಾವು ನಮ್ಮ ಟಾರ್ಗೆಟ್ ಮೀರಿ 15 ಸಾವಿರ ಕೋಟಿ ಹೆಚ್ಚುವರಿ ಪಡೆದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಉಪಸ್ಥಿತರಿದ್ದರು.

ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್‌ ಗಳು ಮೆಜೆಸ್ಟಿಕ್ – ವಿದ್ಯಾರಣ್ಯಪುರ, ಶಿವಾಜಿನಗರ – ಯಲಹಂಕ, ಯಲಹಂಕ – ಕೆಂಗೇರಿ, ಮೆಜೆಸ್ಟಿಕ್ – ಯಲಹಂಕ ಉಪನಗರ, ಹೆಬ್ಬಾಳ – ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಸಂಚರಿಸಲಿದೆ.

ಹಿಂದಿನ ಲೇಖನಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು ಸಂಚು: 7 ಉಗ್ರರ ಬಂಧನ
ಮುಂದಿನ ಲೇಖನಸ್ವಾತಂತ್ರ್ಯ ದಿನಾಚರಣೆ: ಸತತ 9ನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ