ಮನೆ ರಾಜ್ಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

0

ಮೈಸೂರು(Mysuru): ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಬಾಗಿನ ಅರ್ಪಿಸಿದರು

ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಕಬಿನಿ ಜಲಾಶಯದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮಪತ್ನಿ ಜೊತೆ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು, ಕಬಿನಿ ಜಲಾಶಯದ ಉದ್ಯಾನವ ಸ್ವಲ್ಪ ಗೊಂದಲದಲ್ಲಿದೆ. ಈ ಒಂದು ಗೊಂದಲವನ್ನು ಆದಷ್ಟು ಬೇಗ ನಿವಾರಣೆ ಮಾಡಿ ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನದ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.

ಹೆಚ್.ಡಿ.ಕೋಟೆ ತಾಲೂಕು ನಂಜುಂಡಪ್ಪ ವರದಿಯಲ್ಲೂ ಹಿಂದುಳಿದ ತಾಲೂಕು ಅಂತ ಇದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ. ವಿಶೇಷವಾಗಿ ಶಿಕ್ಷಣದಲ್ಲಿ ಅತಿ ಹೆಚ್ಚು ಶಾಲಾ ಕಟ್ಟಡ ತೆಗೆದುಕೊಳ್ಳುತ್ತೇವೆ. ಪಿಹೆಚ್ ಸಿ ಸೆಂಟರ್ ಅಭಿವೃದ್ಧಿ ಮಾಡಲಾಗುವುದು. ಶಾಸಕರಿಗೆ ಈಗಾಗಲೇ ಅನುದಾನ ನೀಡಿದ್ದೇನೆ. ಇನ್ನು ಕೆಲವು ಅನುದಾನ ರಸ್ತೆಗಳು, ಮೊನ್ನೆ ಮಳೆ ಬಂದಾಗ ಮನೆ ಬಿದ್ದಿರುವುದು ಅದನ್ನು ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಯಾವುದೇ ಮನೆ ಇರಲಿ ಯಾರ್ಯಾರ ಮನೆ ಬಿದ್ದಿದೆ, ಯಾವುದೇ ಗೊಂದಲ ನಿರ್ಮಾಣ ಮಾಡದೇ ಕೂಡಲೇ ಅನುದಾನ ನೀಡುವಂತೆ ಏರ್ಪಾಟು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.