ಮನೆ ರಾಜ್ಯ ಸಿದ್ದರಾಮಯ್ಯ ಸೇತುವೆ ಉದ್ಘಾಟಿಸಿದ ಸಿಎಂ – 30 ಕಿಮೀ ಸುತ್ತಾಟ, ಈಗ 3 ಕಿಮೀಗೆ ಇಳಿಕೆ..!

ಸಿದ್ದರಾಮಯ್ಯ ಸೇತುವೆ ಉದ್ಘಾಟಿಸಿದ ಸಿಎಂ – 30 ಕಿಮೀ ಸುತ್ತಾಟ, ಈಗ 3 ಕಿಮೀಗೆ ಇಳಿಕೆ..!

0

ಚಿಕ್ಕಮಗಳೂರು : ಎನ್‌ಆರ್‌ಪುರ ಪಟ್ಟಣದ ಹೊರಹೊಲಯದಲ್ಲಿ ನಿರ್ಮಾಣಗೊಂಡಿರುವ ತಮ್ಮದೇ ಹೆಸರಿನ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದದ ಸೇತುವೆ ಇದಾಗಿದೆ.

ಹತ್ತಾರು ಹಳ್ಳಿ ಗ್ರಾಮಸ್ಥರು 6 ದಶಕಗಳಿಂದ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ. ಇದೇ ವೇಳೆ ಅವರ ಪುತ್ಥಳಿಯನ್ನು ಸಹ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು.‌ ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದಿದ್ದಾರೆ.