ಮನೆ ರಾಜ್ಯ ಬೆಂಗಳೂರಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಸೂಚನೆ

ಬೆಂಗಳೂರಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಸೂಚನೆ

0

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲು ಹೇಳಿದ್ದೇ‌ನೆ. ಕುಡಿಯುವ ನೀರು ಕುಡಿಯೋದಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರು ದುರ್ಬಳಕೆ ಮಾಡಿಕೊಳ್ಳಬಾರದು. ಒಟ್ಟಾರೆ 500 ಎಂಎಲ್​ಡಿ ನೀರಿನ‌ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಮಂಡಳಿ ಮತ್ತು ಬಿಬಿಎಂಪಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಬೆಂಗಳೂರಲ್ಲಿ 1470 MLD ನೀರು ಮಾತ್ರ ಕಾವೇರಿ ನೀರಿನಿಂದ ಬರ್ತಿದೆ. ಉಳಿದದ್ದು ಬೋರ್ ವೆಲ್ ಮೂಲಕ‌ 14 ಸಾವಿರ ಬೋರ್ ವೆಲ್ ಇದೆ. ಅದರಲ್ಲಿ 6 ಬೋರ್ ವೆಲ್ ಡ್ರೈ ಆಗಿಬಿಟ್ಟಿದೆ ಎಂದು ತಿಳಿಸಿದರು.

2600 MLD ನೀರು ಬೆಂಗಳೂರಿಗೆ ಬೇಕು. ಆದರೆ ಬೆಂಗಳೂರಲ್ಲಿ 1470 MLD ನೀರು ಮಾತ್ರ ಬರುತ್ತಿದೆ. ಅದಕ್ಕಿಂತ ಹೆಚ್ಚು ನೀರು ಪಂಪ್ ಮಾಡುವುದಕ್ಕೆ ಆಗಲ್ಲ. ಅದರ ಕ್ಯಾಪಿಸಿಟಿ ಇಷ್ಟೇ ಇರುವುದು. ಕಳೆದ ಬಾರಿಯು ಇಷ್ಟೇ ಆಗಿದ್ದು. 110 ಹಳ್ಳಿಗಳಿಗೆ ಈ ಹಿಂದೆ ನಾನು ಇದ್ದಾಗ ನೀರು ಕೊಡಬೇಕು ಎಂದು ತೀರ್ಮಾನ ಮಾಡಿದ್ದೆ. ಆದರೆ ಹಿಂದಿನ ಸರ್ಕಾರದ ಕೋವಿಡ್ ಅಂತ ಹೇಳಿ ಮಾಡಲಿಲ್ಲ.

ಅದು ಜೂನ್​​ ನಲ್ಲಿ ಆ ಕಾಮಗಾರಿ ಮುಗಿಯುತ್ತೆ. ಕಾವೇರಿ ಮತ್ತು ಕಬಿನಿಯಲ್ಲಿ ಬೆಂಗಳೂರಿಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡಿದ್ದೇವೆ. ಜೂನ್ ​​ನಿಂದ ಮಾನ್ಸೂನ್ ಆರಂಭವಾಗಲಿದೆ. ಕಾವೇರಿಯಲ್ಲಿ 11.4 TMC ನೀರಿದೆ ಕಬಿನಿಯಲ್ಲಿ 9.02 TMC ನೀರಿದೆ ಎಂದು ಹೇಳಿದ್ದಾರೆ.

110 ಹಳ್ಳಿಗಳಲ್ಲಿ 51 ಹಳ್ಳಿಗಳಿಗೆ ಸಾಕಷ್ಟು ತೊಂದರೆ ಇದೆ. ಈ ಜ್ಯೂನ್ ಒಳಗಡೆ 5 ನೇ ಹಂತ ಪೂರ್ಣ ಆಗಲಿದೆ. 750 MLD ನೀರು ಸಿಗುವುದರಿಂದ ನೀರು ಸಮಸ್ಯೆ ಆಗುವುದಿಲ್ಲ. ಮೇ 15 ಕ್ಕೆ ಆಗುತ್ತೆ ಅಂತ ಇದೆ. ಈ ಕಾಮಗಾರಿ ಆದರೆ ನೀರಿನ ಬವಣೆ ಕಡಿಮೆ ಆಗಲಿದೆ. ಬೆಂಗಳೂರಲ್ಲಿ ಹೊಸ ಬೊರ್ ವೇಲ್ ಹಾಕಲು ಸೂಚಿಸಿದ್ದೆ. 315 ಬೋರ್ ವೆಲ್ ಕೊರೆಸಿದ್ದಾರೆ. 1013 ಬೋರ್ ವೆಲ್ ರೀಚಾರ್ಜ್ ಮಾಡಲಾಗುತ್ತಿದೆ‌. ಕೊಳಗೇರೆ ಹತ್ತಿರದ ಪ್ರದೇಶಗಳು ಮತ್ತು 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸೂಚಿಸಿದ್ದೇನೆ‌‌ ಎಂದರು.

ಎಲ್ಲಿ ಸಮಸ್ಯೆ ಇರುತ್ತೆ ಅಲ್ಲಿ ಮೊದಲು ಕ್ರಮ ಕೈಗೊಳ್ಳಬೇಕು. ನೀರು ದುರ್ಬಳಕೆಗೆ ಕ್ರಮ ಕೈಗೊಳ್ಳಬೇಕು. KC ವ್ಯಾಲಿಯಿಂದ ಬೆಂಗಳೂರು ಕೆರೆ ಭರ್ತಿ ಮಾಡಲು, ಸಣ್ಣ ನೀರಾವರಿಗೆ ಸೂಚಿಸಿದ್ದೇನೆ. 14 ಕೆರೆ ಭರ್ತಿ ಮಾಡಲು ಹೇಳಿದ್ದಾನೆ. ಇದ್ರಿಂದ ಅಂತರ್ಜಾಲ ವೃದ್ಧಿಯಾಗಲಿದೆ. ಇದಕ್ಕೆ ಹಣದ ಕೊರತೆ ಇಲ್ಲ. ಕುಡಿಯುವ ನೀರಿಗೆ ಯಾವುದೇ ಹಣದ ಸಮಸ್ಯೆ ಇಲ್ಲ. ಹಣದಿಂದ ತೊಂದರೆ ಆಯ್ತು ಅಂತ ಆಗಬಾರದು. ಸಂಬಂಧ ಪಟ್ಟ ಇಲಾಖೆಯವರು ಪ್ರತಿದಿನ ಸಭೆ ಮಾಡಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ಮಾಡಬೇಕು. ಟ್ಯಾಂಕರ್ ಹೆಚ್ಚಳ ಸೇರಿದಂತೆ ಕಂಟ್ರೋಲ್ ರೂಂ ಹೆಚ್ಚು ಮಾಡಲು ಸೂಚನೆ ನೀಡಿಲಾಗಿದೆ.