ಮೈಸೂರು: ನಗರದ ಜಲಪುರಿಯಲ್ಲಿ ನಿರ್ಮಾಣವಾಗಿರುವ ಪೊಲೀಸ್ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಧ್ಘಾಟಿಸಿದರು.
ಪೊಲೀಸ್ ಆರೋಗ್ಯ ಕೇಂದ್ರ ರೂ.2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 6 ಹಾಸಿಗೆಗಳಿರಲಿವೆ ಈ ಕೇಂದ್ರ ಈ ಹಿಂದೆ ಹಳೇ ಪೊಲೀಸ್ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತಿತ್ತು.
ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸೇವೆ ನೀಡುವ ಕೇಂದ್ರದಲ್ಲಿ ಬೆಳಗಿನಿಂದ ಸಂಜೆವರಗೆ ಸೇವೆ ಲಭ್ಯವಿರಲಿದ್ದು, ಇಬ್ಬರು ಮೆಡಿಕಲ್ ಆಫೀಸರ್,ಫಾರ್ಮಾಸಿಸ್ಟ್, ಮೈನರ್ ಆಪರೇಷನ್ ಥಿಯೇಟರ್,ಕಿರಿಯ ಆರೋಗ್ಯ ಸಹಾಯಕರು ಇರಲಿದ್ದು, ಲ್ಯಾಬೊರೇಟರಿ, ಪಿಸಿಯೋಥೆರಪಿ ಸೇವೆ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹಾದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಮಂಜೇಗೌಡ, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಇದ್ದರು.
Saval TV on YouTube