ಮನೆ ರಾಜಕೀಯ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌’ನ ಕೈಗೊಂಬೆ: ನಳಿನ್ ಕುಮಾರ್ ಕಟೀಲ್ ಟೀಕೆ

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌’ನ ಕೈಗೊಂಬೆ: ನಳಿನ್ ಕುಮಾರ್ ಕಟೀಲ್ ಟೀಕೆ

0

ಬೆಂಗಳೂರು: ಹೊಸ ಮುಖ್ಯಮಂತ್ರಿ ಮೊದಲ ದಿನವೇ ಕಾಂಗ್ರೆಸ್ ಹೈಕಮಾಂಡ್‌ ನ ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಅವರು ಶನಿವಾರ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರವನ್ನು ಪೋಸ್ಟ್ ಮಾಡಿರುವ  ಕಟೀಲ್, ತಮ್ಮ ಸಂಪುಟದಲ್ಲಿ ತಮ್ಮ ಆಯ್ಕೆಯ ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕೂಡ ಸಿಎಂಗಿಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ ಎಂದಿದ್ದಾರೆ.

ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಅವರು ಮೊದಲ ದಿನದಿಂದಲೇ ತಾವು ಕಾಂಗ್ರೆಸ್ ಹೈಕಮಾಂಡ್‌ ನ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಈ ಹೆಸರುಗಳನ್ನು ಸಂಪುಟ ಸಚಿವರನ್ನಾಗಿ ಅನುಮೋದಿಸಿದ್ದಾರೆ. ಸೂಕ್ತ ಕಾನೂನಿನ ನಿಬಂಧನೆಗಳ ಪ್ರಕಾರ ಈ ನಿರ್ಧಾರವನ್ನು ಕಾರ್ಯಗತಗೊಳಿಸುವಂತೆ ನೋಡಿಕೊಳ್ಳಲು ಈ ಮೂಲಕ ನಿಮ್ಮನ್ನು ವಿನಂತಿಸಲಾಗಿದೆ ಎಂದು ವೇಣುಗೋಪಾಲ್ ಪತ್ರದಲ್ಲಿ ಬರೆದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜಯಭೇರಿ ಬಾರಿಸಿ ಸರಿಯಾಗಿ ಒಂದು ವಾರದ ನಂತರ, ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಮತ್ತು 8 ಶಾಸಕರು ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಹಿಂದಿನ ಲೇಖನಕರ್ನಾಟಕ ಚುನಾವಣೆಯಲ್ಲಿನ ಸೋಲನ್ನು ಮುಚ್ಚಿಹಾಕಲು 2000 ರೂ. ನೋಟು ಹಿಂಪಡೆವ ತಂತ್ರ: ಎಂಕೆ ಸ್ಟಾಲಿನ್
ಮುಂದಿನ ಲೇಖನಪಪ್ಪಾಯಿಯಿಂದ ನರದೌರ್ಬಲ್ಯ ನಿವಾರಣೆ